‘ವಿವಿಕ್ತ’ದಲ್ಲಿ ನಟ ಧರ್ಮ ಕೀರ್ತಿ ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

viva

ಈ ಹಿಂದೆ ನವಗ್ರಹ, ಒಲವೇ ವಿಸ್ಮಯ, ಮಮ್ತಾಜ್ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದ ನಟ ಧರ್ಮ ಕೀರ್ತಿರಾಜ್ ಈಗ ವಿವಿಕ್ತ ಎಂಬ ಸಸ್ಪೆನ್ಸ್ ಚಿತ್ರದಲ್ಲಿ ಮತ್ತೆ ಸದ್ದು ಮಾಡಲು ಬರುತ್ತಿದ್ದಾರೆ. ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ರಘು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ರಾಕೇಶ್ ಹಾಗೂ ಭಾಸ್ಕರ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಘು ನಾನು ಕಳೆದ 2-3 ವರ್ಷಗಳ ಹಿಂದೆ ರಿಯಲ್ ಆಗಿ ನೋಡಿದಂಥ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆಯನ್ನು ರಚಿಸಿದ್ದೇನೆ. ಇಡೀ ಸಿನಿಮಾ ಕುತೂಹಲದಿಂದ ಹೋಗುತ್ತದೆ ಎಂದು ಹೇಳಿದರು.

ನಂತರ ಈ ಚಿತ್ರದ ನಾಯಕ ಧರ್ಮಕೀರ್ತಿ ಮಾತನಾಡಿ, ಇದೊಂದು ವಿಭಿನ್ನ ಬಗೆಯ ಪ್ರಯತ್ನ. ನಿರ್ದೇಶಕರು ಪೂರ್ವ ತಯಾರಿ ಮಾಡಿಕೊಂಡು ಈ ಚಿತ್ರ ಸಿದ್ಧಪಡಿಸಿಕೊಂಡಿದ್ದಾರೆ. ಕೆಲವು ನೈಜ ಘಟನೆಗಳ ಆಧಾರಿತ ವಿಚಾರವನ್ನು ಕೂಡ ಈ ಚಿತ್ರದಲ್ಲಿ ತೋರಿಸಲಿದ್ದಾರೆ, ನಿಮ್ಮೆಲ್ಲರ ಸಹಕಾರ ಬೇಕು ಎಂದರು. ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ಪೂಜಾ ಮಾತನಾಡಿ, ಸಾಹೇಬ ಚಿತ್ರದ ನಂತರ ಅಭಿನಯಿಸುತ್ತಿರುವ ಚಿತ್ರವಿದು. ಈ ಚಿತ್ರದ ಮೂಲಕ ನನ್ನ ಹೆಸರನ್ನು ಸಾನಿಕಾ ಎಂದು ಬದಲಾಯಿಸಿಕೊಂಡಿದ್ದೇನೆ. ಪಕ್ಕಾ ಮಿಡಲ್ ಕ್ಲಾಸ್ ಕುಟುಂಬದ ಹುಡುಗಿಯಾದ ಯುಕ್ತಾ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದರು. ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ ಒಟ್ಟು 4 ಹಾಡುಗಳು ಈ ಚಿತ್ರದಲ್ಲಿವೆ ಎಂದರು. ನಿರ್ಮಾಪಕ ರಾಕೇಶ್ ಮಾತನಾಡಿ, ನಿರ್ದೇಶಕ ರಘು ಅವರು ನನ್ನ ಬಳಿ ಬಂದು ಈ ಕಥೆಯನ್ನು ಹೇಳಿದಾಗ ತುಂಬಾ ವಿಭಿನ್ನವಾಗಿದೆ ಅನ್ನಿಸಿತು. ಅದಕ್ಕೆ ಈ ಚಿತ್ರ ಮಾಡುತ್ತಿದ್ದೇನೆ ಎಂದರು.ಮತ್ತೊಬ್ಬ ನಿರ್ಮಾಪಕ ಭಾಸ್ಕರ್ ಕೂಡ ಇವರಿಗೆ ಸಾಥ್ ನೀಡಿದ್ದಾರೆ. ಭಾಸ್ಕರ್ ವಿ.ರೆಡ್ಡಿ ಛಾಯಾಗ್ರಹಣ ಮಾಡುತ್ತಿದ್ದು, ಅಭಿ ಹಿರಿಯೂರು ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.

Facebook Comments

Sri Raghav

Admin