ಎಂ.ಎ.ಪದವೀಧರೆ ಲವ್ಸ್ ಬಸ್ ಡ್ರೈವರ್, ಮುಂದೇನಾಯ್ತು ಗೊತ್ತೇ…?!

ಈ ಸುದ್ದಿಯನ್ನು ಶೇರ್ ಮಾಡಿ

Love-Story--01

ತುಮಕೂರು, ಡಿ.14-ಆತ ಬಸ್ ಚಾಲಕ, ಈಕೆ ಎಂ.ಎ. ಪದವೀಧರೆ. ಇಬ್ಬರ ನಡುವೆ ಒಂದೇ ಒಂದು ಟ್ರಿಪ್‍ನಲ್ಲಿ ಪ್ರೇಮಾಂಕುರವಾಗಿ ಇಂದು ಆ ಯುವತಿಯ ಬಾಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಜಿಲ್ಲೆಯ ಊರ್ಡಿಗೆರೆ ಗ್ರಾಮದ ಯುವತಿ ಪದವಿ ವ್ಯಾಸಂಗ ಮಾಡುವಾಗ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ದೇವರಹಳ್ಳಿಯ ನಿವಾಸಿ ಬಸ್ ಚಾಲಕ ರಂಗನಾಥ ಸ್ವಾಮಿಯ ಕಣ್ಣು ಈ ಯುವತಿ ಮೇಲೆ ಬೀಳುತ್ತದೆ.
ಹೇಗೋ ಪುಸಲಾಯಿಸಿ ಸ್ನೇಹ ಬೆಳೆಸುತ್ತಾನೆ. ಇವರಿಬ್ಬರ ಸ್ನೇಹ ಪ್ರೇಮಾಂಕುರವಾಗುತ್ತದೆ.

Love-Story--02

ಕಳೆದ 4 ವರ್ಷಗಳಿಂದ ಇಬ್ಬರ ಪ್ರೀತಿ ಗಟ್ಟಿಯಾಗುತ್ತಾ ಹೋಗುತ್ತದೆ. ದುರಂತವೆಂದರೆ ಈಗಾಗಲೇ ಈ ಭೂಪನಿಗೆ ಒಂದು ಮದುವೆಯಾಗಿದ್ದು, ಈ ವಿಷಯವನ್ನು ತನ್ನ ಪ್ರೇಯಸಿಗೆ ತಿಳಿಸಿರಲಿಲ್ಲ. ಯುವತಿಯೊಂದಿಗೆ ಸಿನಿಮಾ, ಪಾರ್ಕ್ ಎಂದು ಸುತ್ತಾಡಿದ್ದಾನೆ. ಇಷ್ಟು ಪ್ರೀತಿ ಮಾಡಿದ್ದು ಸಾಕು ಇನ್ನು ಮದುವೆಯಾಗೋಣವೆಂದು ಯುವತಿ ರಂಗನಾಥನನ್ನು ಒತ್ತಾಯಿಸಿದ್ದಾಳೆ. ಹೇಗೋ ಮೊದಲನೇ ಹೆಂಡತಿಯನ್ನು ಒಪ್ಪಿಸಿ ಕೊನೆಗೆ ಮದುವೆಯೂ ಆದ. ಆದರೆ ಮದುವೆಯಾಗಿದ್ದೇ ತಡ ಆ ಯುವತಿಗೆ ಕೊಡಬಾರದ ಚಿತ್ರಹಿಂಸೆ ಕೊಡಲು ಪ್ರಾರಂಭಿಸಿ ಆ ಯುವತಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.

Love-Story--05

ಕಳೆದ ನಾಲ್ಕು ತಿಂಗಳಿನಿಂದ ಆ ಯುವತಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾನೆ. ಆದರೆ ಏನು ಮಾಡೋದು ಪ್ರೀತಿಸಿ ಮದುವೆಯಾಗಿದ್ದಕ್ಕೆ ಇದನ್ನೆಲ್ಲ ಅನುಭವಿಸಬೇಕು. ಅತ್ತ ತವರು ಸೇರಿಕೊಳ್ಳಲು ಆಗುತ್ತಿಲ್ಲ, ಇತ್ತ ಗಂಡನ ಮನೆಯಲ್ಲಿ ಸುಖವಾಗಿ ಇರಲಿ ಸಾಧ್ಯವಾಗದೆ ಯುವತಿ ಬೀದಿಗೆ ಬೀಳುವಂತಾಗಿದೆ. ಕೊನೆಗೆ ನ್ಯಾಯ ಕೊಡಿಸಿ ಎಂದು ಪೊಲೀಸರು ಮೊರೆ ಹೋಗಿದ್ದಾಳೆ.

Love-Story--03

 

Love-Story--04

Love-Story--06

Facebook Comments

Sri Raghav

Admin