ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

11

ಚನ್ನಪಟ್ಟಣ, ಡಿ.14- ಕೊಳೆತ ಮೃತದೇಹವೊಂದು ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಅವ್ವೇರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ರಾಮಕೃಷ್ಣೇಗೌಡ (70) ಮೃತ ವ್ಯಕ್ತಿ. ತಾಲ್ಲೂಕಿನ ಸುಳ್ಳೇರಿ ಗ್ರಾಮದ ಅವರು ಮೂರು ದಿನಗಳ ಹಿಂದೆ ಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದರು.

ನಿನ್ನೆ ಮುಂಜಾನೆ ಅವ್ವೇರಹಳ್ಳಿ ಕೆರೆ ದಡದಲ್ಲಿ ಕೊಳೆತ ಶವ ಪತ್ತೆಯಾಗಿ ಆತನ ಚಹರೆ ಗಮನಿಸಿದ ಸ್ಥಳೀಯರು ಆತ ಸುಳ್ಳೇರಿ ಗ್ರಾಮದ ರಾಮಕೃಷ್ಣೇಗೌಡ ಎಂದು ಗುರುತಿಸಿದ್ದಾರೆ. ರೈತ ಕುಟುಂಬದಿಂದ ಬಂದ ರಾಮಕೃಷ್ಣೇಗೌಡ ವ್ಯವಸಾಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಬ್ಯಾಂಕ್ ಹಾಗೂ ಇತರೆ ಕಡೆ ಕೈ ಸಾಲ ಮಾಡಿಕೊಂಡು ಸುಸ್ತಿದಾರನಾಗಿದ್ದನು. ಸಾಲದ ಬಾಧೆ ತಾಳಲಾರದೆ ಮಾನಸಿಕವಾಗಿ ಮನನೊಂದಿದ್ದ ಆತ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ಮನೆಯಿಂದ ಕಾಣೆಯಾಗಿದ್ದ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹ ನೀರಿನಲ್ಲಿ ಮೂರು ದಿನ ಇದ್ದು ಕೊಳೆತು ಅಳಿದು ಹೋಗುವ ಸ್ಥಿತಿಗೆ ಹೋಗಿದ್ದರಿಂದ ಪೊಲೀಸರು ಕೆರೆಯ ಬಳಿಯೇ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

Facebook Comments