ಬಿ.ಸಿ.ಎಲ್. ನಲ್ಲಿ ಸ್ಯಾಂಡಲ್ ವುಡ್ ಸೆಲಬ್ರಿಟಿಗಳ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

BCL

ಪ್ರಮುಖವಾಗಿ ಕನ್ನಡ ಚಿತ್ರರಂಗದ ಸೆಲೆಬ್ರಟಿಗಳು ಆಡುವ ಬಾಕ್ಸ್ ಕ್ರಿಕೆಟ್ ಲೀಗ್ ಟೀಮ್‍ನಲ್ಲಿ ಕಳೆದ ವರ್ಷ ಆರು ತಂಡಗಳು ಪ್ರಮುಖವಾಗಿ ಪಾಲ್ಗೊಂಡಿದ್ದವು. ಈ ಬಾರಿ ಅದು ಎಂಟು ತಂಡವಾಗಿದೆ. ಈ ಬಾರಿ ನಡೆಯುವ ಒಟ್ಟು 27 ಪಂದ್ಯಗಳಲ್ಲಿ ಸುಮಾರು 150ಕ್ಕೂ ಹಚ್ಚು ತಾರೆಯರು ಭಾಗವಹಿಸಲಿದ್ದಾರೆ. ಶಿವಮೊಗ್ಗ, ಗುಲ್ಬರ್ಗಾ ಈಬಾರಿ ಹೊಸದಾಗಿ ಸೇರಿರುವ ತಂಡಗಳು. ಬೆಂಗಳೂರು ಡ್ರಾಗನ್ಸ್, ಮೈಸೂರು ಟೈಗರ್ಸ್, ಬಳ್ಳಾರಿ ಬ್ಲಾಸ್ಟರ್ಸ್, ಹುಬ್ಬಳ್ಳಿ ಹಂಟರ್ಸ್, ಮಂಗಳೂರು ಶಾರ್ಕ್, ಶಿವಮೊಗ್ಗ ಸ್ಟಾಲಿನ್, ದಾವಣಗೆರೆ ಲಯನ್ಸ್ ಮತ್ತು ಗುಲ್ಬರ್ಗಾ ಗ್ಲಾಡಿಯೇಟರ್ಸ್ ಹೀಗೆ ಎಂಟು ತಂಡಗಳು ಈ ಬಾರಿಯ ಬಿಸಿಎಲ್ ಪಂದ್ಯದಲ್ಲಿ ಭಾಗವಹಿಸಿ ಆಡಲಿದೆ.

2016ರಲ್ಲಿ ಹೆಚ್ಚಾಗಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವರುಗಳು ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಅನು ಚಿತವಾಗಿ ನಡೆದುಕೊಂಡಿದ್ದರು. ಹಾಗಾಗಿ ಈ ಸಲ ಕೇವಲ ನುರಿತ ಕಲಾವಿದರಿಗೆ ಮಾತ್ರ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪ್ರತಿ ಪಂದ್ಯದಲ್ಲಿ 10 ಪುರುಷರು, ಮಹಿಳೆಯರು ಆಡಲಿದ್ದಾರೆ ಎಂದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ನೇತೃತ್ವ ವಹಿಸಿಕೊಂಡಿರುವ ನಿರ್ಮಾಪಕ ಕಮರ್ ಹೇಳಿಕೊಂಡರು. ಇನ್ನು ಈ ಪಂದ್ಯದಲ್ಲಿ ಭಾಗವಹಿಸುವ ಕಲಾವಿದರಿಗೆ ಸ್ಪಾಂಜ್‍ಬಾಲ್ ಕ್ರಿಕೆಟ್ ತರಬೇತಿಯನ್ನು ಒಂದು ವಾರದ ಕಾಲ ನೀಡಲಿದ್ದು, ನಂತರ ಅವರನ್ನು ಆಖಾಡಕ್ಕೆ ಕಳುಹಿಸುತ್ತಾರೆ. ನಾಗರಬಾವಿಯಲ್ಲಿರುವ ಆಕಾಶ್ ಸ್ಟುಡಿಯೋದಲ್ಲಿ ಹದಿನೇಳು ಪಂದ್ಯಗಳ ಪ್ರಿಪರೇಷನ್ ಇದೇ ತಿಂಗಳಲ್ಲಿ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ನಾಗರಾಜ್ ನಿರ್ಮಾಪಕರಾಗಿ ದಾವಣಗೆರೆ ತಂಡವನ್ನು ಪಡೆದುಕೊಂಡಿದ್ದಾರೆ. ಆದಿ ಲೋಕೇಶ್ ತಂಡದ ಕ್ಯಾಪ್ಟನ್ ಆಗಿದ್ದು, ಅದಿತಿ ರಾವ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇವರೊಂದಿಗೆ ಅಕ್ಷಯ್, ದೀಪಿಕಾದಾಸ್, ಸಭಾ ಸೇರಿದ್ದಾರೆ. ಬಿಸಿಎಲ್‍ನ ಕ್ರಿಯೆಟೀವ್ ನಿರ್ದೇಶಕರಾಗಿ ಉದಯಕುಮಾರ್ ಹಾಗೂ ಆಕಾಶ್ ಪರ್ವ ಇದ್ದಾರೆ.

Facebook Comments

Sri Raghav

Admin