ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--02

ಅಹಮದಾಬಾದ್, ಡಿ.14-ಗುಜರಾತ್‍ನ 93 ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಜಿಲ್ಲೆಯ ಸಬರ್‍ಮತಿ ವಿಧಾನಸಭಾ ಕ್ಷೇತ್ರದ ಶಾಲೆಯೊಂದರ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ರನೀಪ್ ಬಡಾವಣೆಯ ನಿಶಾನ್ ಸ್ಕೂಲ್‍ನ ಮತಗಟ್ಟೆಯಿಂದ ಹೊರಬಂದ ಅವರು ನಂತರ ತಮ್ಮ ಬೆರಳಿಗೆ ಹಾಕಿರುವ ಮತದಾನದ ಗುರುತು ಶಾಯಿಯನ್ನು ಹೊರಗೆ ನಿಂತಿದ್ದ ಸಹಸ್ರಾರು ಬಿಜೆಪಿ ಕಾರ್ಯಕರ್ತರಿಗೆ ತೋರಿಸುತ್ತಾ ಕೆಲ ದೂರ ನಡೆದರು.

ನಂತರ ಅಹಮದಾಬಾದ್ ರಸ್ತೆಗಳಲ್ಲಿ ತಮ್ಮ ಕಾರಿನ ಬಾಗಿಲು ತೆರೆದು ನಿಧಾನವಾಗಿ ಚಲಿಸಿದ ಮೋದಿಗೆ ಜನರು ಜೈಕಾರ ಹಾಕಿದರು. ಗುಜರಾತ್ ಎರಡನೇ ಹಂತದ ಚುನಾವಣೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಮತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್‍ನ ಬಂಡಾಯ ನಾಯಕ ಶಂಕರ್‍ಸಿಂಗ್ ವಘೇಲಾ ಮೊದಲಾದವರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Facebook Comments

Sri Raghav

Admin