`18 ರಿಂದ 25′ ವರ್ಷದವರ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

18

ಈ ಹಿಂದೆ ತುಫಾನ್ ಹಾಗೂ ಬಳ್ಳಾರಿ ದರ್ಬಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟೈಲ್ ಶ್ರೀನು ಈ ಬಾರಿ ವಿಶೇಷ ಕಥಾನಕವನ್ನು ತೆಗೆದುಕೊಂಡು 18 ರಿಂದ 25 ಎಂಬ ಚಲನಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
18 ರಿಂದ 25ರ ಹರೆಯದ ಹೃದಯ ಗಳ ಮಿಡಿತವನ್ನು ಈ ಚಿತ್ರದಲ್ಲಿ ನಿರೂಪಿಸುವ ಪ್ರಯತ್ನವನ್ನು ಸ್ಮೈಲ್‍ ಶ್ರೀನು ಮಾಡಿದ್ದಾರೆ.
ಲಕ್ಷ್ಮಿಪ್ರಿಯ ಪ್ರೊಡಕ್ಷನ್ ಲಾಂಛನದಲ್ಲಿ ತಮ್ಮಲಪಲ್ಲಿ ರಾಮ ಸತ್ಯನಾರಾಯಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ಕೆ.ನಾಯ್ಡು ಛಾಯಾಗ್ರಹಣ, ಬಿ.ಮಲ್ಲಿ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ವೈಯಲೆನ್ಸ್ ವೇಲು, ಸಾಹಸ ಚಿರಂಜೀವಿ ನೃತ್ಯ ನಿರ್ದೇಶನವಿದೆ. ಅಭಿರಾಮ್, ಋಷಿತೇಜ, ಅಖಿಲಾ, ವಿದ್ಯಾಶ್ರೀ, ಫಾರೂಕ್ ಖಾನ್, ನಾಗ ಶೇಖರ್, ಉದಯ ಭಾಸ್ಕರ್, ರವಿರಾಮ್, ಪೇಲಾ ಶ್ರೀನಿವಾಸ ಬಾಬು, ರಾಕ್ ಲೈನ್ ಸುಧಾಕರ್, ಮಿಮಿಕ್ರಿ ಗೋಪಿ, ಸೌಮ್ಯ, ಕುಮಾರ್ ಮುಂತಾದವರ ತಾರಾ ಬಳಗವಿದೆ.

Facebook Comments

Sri Raghav

Admin