ಈ ಟಿಪ್ಸ್ ನಿಮ್ಮ ಮುಖ ಸುಕ್ಕುಗಟ್ಟುವುದನ್ನು ತಡೆಯುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Anti-Aging-02

ಆಕರ್ಷಕವಾಗಿ ಕಾಣಬೇಕೆಂಬ ಆಸೆ ಯಾರಿಗಿಲ್ಲ ಹೇಳಿ, ಆದರೆ ಮುಖದ ಸೌಂದರ್ಯ ಉಳಿಸಲು ಹೆಣಗಾಡುವವರೇ ಹೆಚ್ಚು. ಮುಖದ ಮೇಲೇ ಸುಕ್ಕು ಮೂಡಿತೆಂದರೆ ನಗು ಕೂಡ ಬಾಡಿ ಹೋಗುತ್ತದೆ ಹೆಂಗಳೆಯರಲ್ಲಿ. ನಿಮ್ಮ ವದನಾರವಿಂದ ಯೌವ್ವನದಿಂದ ಕೂಡಿರಲು ಇಲ್ಲಿದೆ ನೋಡಿ ಮದ್ದು.
ಒಂದು ಚಮಚ ಬಾದಾಮಿ ಎಣ್ಣೆಯನ್ನು ದಾಳಿಂಬೆ ರಸಕ್ಕೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡರೆ. ಮುಖದ ಸುಕ್ಕುಗಳು ದೂರವಾಗುತ್ತವೆ. ದಾಳಿಂಬೆ ರಸ ಮತ್ತು ಒಂದು ಚಮಚ ಜೇನಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡರೆ ಒಣತ್ವಚೆ ಮಾಯವಾಗುತ್ತದೆ.

ಹೊರಗಡೆ ಹೋಗಿ ಮನೆಗೆ ವಾಪಸ್ ಬಂದ ಬಳಿಕ ದಾಳಿಂಬೆ ಬೀಜದ ರಸಕ್ಕೆ ಒಂದು ಚಮಚ ಲಿಂಬೆ ರಸದ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ವದನ ಮೃದುಗೊಳ್ಳುತ್ತದೆ. ನಿಯಮಿತವಾಗಿ ಇದನ್ನು ಬಳಸುತ್ತಾ ಬಂದರೆ ಮುಖದ ಮೇಲಿನ ಸುಕ್ಕುಗಳು ದೂರವಾಗಿ, ತ್ವಚ್ಚೆಯ ಕಾಂತಿ ಹೆಚ್ಚುತ್ತದೆ ದಾಳಿಂಬೆ ಸೇವನೆಯೂ ಆರೋಗ್ಯಕ್ಕೆ ಉತ್ತಮಕಾರಿ.  ದಾಳಿಂಬೆಯಿಂದ ದೇಹಕ್ಕೆ ಇನ್ನಿತರ ರೀತಿಯಲ್ಲೂ ಉಪಯೋಗವಿದ್ದು , ಅದರ ಬಳಕೆ ನಿಯಮಿತವಾಗಿದ್ದಲ್ಲಿ ಉತ್ತಮ ಆರೋಗ್ಯ ಪಡೆಯಬಹುದು.

Facebook Comments

Sri Raghav

Admin