ಕನ್ನಡ ಜಾಗೃತಿ ಕಾರ್ಯಕ್ರಮ ಇಂದಿನಿಂದ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Kannada-Flag--01
ಬೆಂಗಳೂರು,ಡಿ.15-ಕಾವೇರಿ ಕನ್ನಡಿಗರ ವೇದಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಕನ್ನಡ ಜಾಗೃತಿ ಸಭೆ ಮತ್ತು ಶ್ರೀ ಮಾರಮ್ಮದೇವಿ ಉತ್ಸವವನ್ನು ಇಂದಿನಿಂದ ಡಿ.17ರವರೆಗೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಧ್ವಜಾರೋಹಣ ನೆರವೇರಲಿದ್ದು , ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ನೆರವೇರಿಸಲಿದ್ದಾರೆ.

ಶಾಸಕ ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಜೆಪಿ ಮುಖಂಡರಾದ ಎಂ.ನಾಗರಾಜು, ಡಾ.ಪ್ರಸನ್ನ , ಒಕ್ಕಲಿಗರ ಸಂಘದ ನಿರ್ದೇಶಕ ಕೆ.ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಳ್ಳುವರು. ನಾಳೆ ಮಧ್ಯಾಹ್ನ ಹಾಗೂ ಸಂಜೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು , ಕಾರ್ಯಕ್ರಮದಲ್ಲಿ ಕೋಡಿ.ಯು.ಮೋಟಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಚಲನಚಿತ್ರ ನಟ ಧ್ರುವ ಸರ್ಜ ಭಾಗವಹಿಸುವರು. 17ರಂದು ಬೆಳಗ್ಗೆ 10 ಗಂಟೆಗೆ ಮುಖ್ಯ ಬೀದಿಗಳಲ್ಲಿ ಮಾರಮ್ಮ ದೇವಿಯ ಮೆರವಣಿಗೆ ನಡೆಸಲಾಗುವುದು.

Facebook Comments

Sri Raghav

Admin