ನೋಡುಗರ ಮನ ಕಲಕುವಂತಿತ್ತು ಆಹಾರಕ್ಕಾಗಿ ಈ ಕೋತಿ ಪರಿತಪಿಸುತ್ತಿದ್ದ ದೃಶ್ಯ ..!

ಈ ಸುದ್ದಿಯನ್ನು ಶೇರ್ ಮಾಡಿ

Koti--02

ತುಮಕೂರು, ಡಿ.15-ಪ್ರಾಣಿಗಳಿಗೆ ಮಾತು ಬರಲ್ಲ ನಿಜ. ಆದರೆ, ಅವುಗಳ ಹಾವ-ಭಾವ ಎಂಥವರಿಗೂ ಅರ್ಥವಾಗಲಿದೆ. ತೀವ್ರ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಕೋತಿಯೊಂದು ನಂದಿನಿ ಮಳಿಗೆಗೆ ಬಂದು ಆಹಾರ ನೀಡಿ ಎಂದು ಪರಿತಪಿಸುತ್ತಿದ್ದ ದೃಶ್ಯ ನೋಡುಗರ ಮನ ಕಲಕುವಂತಿತ್ತು. ನಗರದ ಜಗದೀಶ್ ಎಂಬುವರ ನಂದಿನಿ ಕ್ಷೀರ ಮಳಿಗೆಗೆ ಬಂದ ವಾನರವೊಂದು ಯಾವುದೇ ಪದಾರ್ಥಗಳನ್ನು ಸ್ವತಃ ತೆಗೆದುಕೊಳ್ಳದೆ ನನಗೆ ಹೊಟ್ಟೆ ಹಸಿಯುತ್ತಿದೆ. ತಿನ್ನಲು ಏನಾದರೂ ಕೊಡಿ ಎಂದು ಮಾಲೀಕನನ್ನು ಅಂಗಲಾಚುತ್ತಿತ್ತು.

ಮೊದಲೇ ಈ ವಾನರಕ್ಕೆ ಆರೋಗ್ಯ ಬೇರೆ ಸರಿಯಿರಲಿಲ್ಲ. ಆದರೂ ಹೊಟ್ಟೆ ಕೇಳಬೇಕಲ್ಲ. ಏನಾದರೂ ತಿನ್ನಲು ಕೊಡಿ ಎಂದು ಕೈ ಸನ್ನೆ ಮಾಡುತ್ತಿತ್ತು. ಇದನ್ನು ಗಮನಿಸಿದ ನಿವೃತ್ತ ಶಿಕ್ಷಕರೊಬ್ಬರು ಅಂಗಡಿ ಮಾಲೀಕನಿಗೆ ಅದು ತಿನ್ನಲು ಆಹಾರ ಕೇಳುತ್ತಿದೆ ಕೊಡಿ ಎಂದು ವಿವರಿಸಿದರು.
ಕೋತಿಯ ಮೂಕ ವೇದನೆ ಅರ್ಥ ಮಾಡಿಕೊಂಡ ಮಾಲೀಕರು ಮತ್ತು ಸ್ಥಳೀಯರು ಹೊಟ್ಟೆ ತುಂಬ ಆಹಾರ ನೀಡಿದರು.

Facebook Comments

Sri Raghav

Admin