ಪಶ್ಚಿಮ ಬಂಗಾಳದ 70 ಲಕ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

Mamata--01

ಕೋಲ್ಕತಾ, ಡಿ.15-ಪಶ್ಚಿಮ ಬಂಗಾಳದ ಸರ್ಕಾರಿ ಪ್ರೌಢಶಾಲೆಗಳ 70 ಲಕ್ಷ ವಿದ್ಯಾರ್ಥಿಗಳಿಗೆ ಸಬುಜ್ ಸಾಥಿ ಯೋಜನೆಯಡಿ ಉಚಿತ ಬೈಸಿಕಲ್‍ಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ಎರಡು ವರ್ಷಗಳ ಹಿಂದೆ ಇದೇ ದಿನ ನಾವು ಸಬುಜ್ ಸಾಥಿ ಯೋಜನೆಯನ್ನು ಆರಂಭಿಸಿದೆವು. ಈ ಯೋಜನೆಯಡಿ ಈವರೆಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 70 ಲಕ್ಷ ಸೈಕಲ್‍ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ಇಂದು ಬೆಳಗ್ಗೆ ಟ್ವೀಟರ್‍ನಲ್ಲಿ ಬರೆದಿದ್ದಾರೆ.

ದೂರದ ಪದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಈಗ ಸೈಕಲ್ ಮೂಲಕ ಶಾಲೆಗಳಿಗೆ ಸುಲಭವಾಗಿ ಹೋಗುವಂತಾಗಿದೆ. ಅದೇ ರೀತಿ ನಾವು ಮಾ, ಮತಿ ಮತ್ತು ಮನುಷ್ ಯೋಜನೆಗಳ ಅನುಷ್ಠಾನಕ್ಕೂ ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin