ಪ್ರೇಮ ಪ್ರಕರಣದಿಂದ ಸುದ್ದಿಯಾಗಿದ್ದ ಪ್ರೇಮಕುಮಾರಿ ರಾಜಕೀಯಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Premakumari--01

ಮೈಸೂರು, ಡಿ.15-ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ಪ್ರೇಮ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಪ್ರೇಮಕುಮಾರಿ ಅವರು ಈಗ ಚುನಾವಣಾ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ಆದರೆ ಸ್ವಚ್ಛವಾದ ಮತ್ತು ಬದ್ಧತೆಯಿರುವ ಪಕ್ಷದಲ್ಲಿ ರಾಜಕಾರಣ ಮಾಡಬೇಕು ಎಂಬ ಆಸೆ ಇದೆ. ಈಗಷ್ಟೇ ನಾನು ನಿರ್ಧಾರ ಮಾಡಿರುವುದರಿಂದ ಇನ್ನು ಯಾವ ಪಕ್ಛ್ಷದೊಂದಿಗೂ ಮಾತುಕತೆ ನಡೆಸಿಲ್ಲ.

ಮಾಜಿ ಸಚಿವ ರಾಮದಾಸ್ ಅವರೇ ನನ್ನ ಪತಿ, ಹಿತೈಷಿ ಮತ್ತು ರಾಜಕೀಯ ಗುರು. ಅವರ ತೆಗೆದುಕೊಳ್ಳುವ ನಿರ್ಧಾರ ಆಧರಿಸಿ ನನ್ನ ರಾಜಕೀಯ ಭವಿಷ್ಯ ನಿಂತಿದೆ ಎಂದು ಹೇಳಿದ ಪ್ರೇಮಕುಮಾರಿ ಅವರು ಅವರ ವಿರುದ್ಧ ದಿಕ್ಕಿನಲ್ಲಿ ರಾಜಕಾರಣ ಎದುರಾಗಿ ಅವರ ವಿರುದ್ಧವೇ ಸ್ಪರ್ಧಿಸುವ ಸ್ಥಿತಿ ನಿರ್ಮಾಣವಾದರೆ ನಾನು ಅದಕ್ಕೂ ಸಿದ್ದಳಿದ್ದೇನೆ ಎಂದು ಪ್ರಕಟಿಸಿದ್ದಾರೆ. ಕೆಲವು ಕಾನೂನಾತ್ಮಕ ಸಮಸ್ಯೆಗಳಿವೆ. ನನ್ನ ಮತ್ತು ರಾಮದಾಸ್ ಅವರ ನಡುವಿನ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಅದು ಬಗೆಹರಿಸಿಕೊಂಡ ನಂತರ ಚುನಾವಣಾ ರಾಜಕೀಯಕ್ಕೆ ಬರುತ್ತೇನೆ. ನಾಯಕರಾಗಿ ರಾಜಕಾರಣಕ್ಕೆ ಇಳಿದಾಗ ಜನ ಕೇಳುವ ಪ್ರಶ್ನೆಗೆ ಉತ್ತರಿಸುವ ನೈತಿಕತೆ ನಮಗಿರಬೇಕು. ಅದಕ್ಕಾಗಿ ಕಾನೂನು ಹೋರಾಟದಿಂದ ಮುಕ್ತಳಾಗಿ ಚುನಾವಣಾ ಅಖಾಡಕ್ಕಿಳಿಯುತ್ತೇನೆ ಎಂದು ಹೇಳಿದರು.

ನಾನು ಕಾಂಗ್ರೆಸ್ ಜೊತೆಗೆ ಎಂದಿಗೂ ಸಂಪರ್ಕದಲ್ಲಿಲ್ಲ. ಆದರೆ ಹಿಂದೆ ಸರ್ಕಾರಿ ನೌಕರಿಯಲ್ಲಿದ್ದಾಗ ಒಮ್ಮೆ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದೆ. ಈಗ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂದು ಅವರು ಹೇಳಿದರು. ರಾಮದಾಸ್ ಅವರಿಗೆ ಈ ಬಾರಿ ಚುನಾವಣೆ ಟಿಕೆಟ್ ನೀಡಬಾರದು ಎಂದು ಕೆಲವರು ಪಿತೂರಿ ನಡೆಸುತ್ತಿದ್ದು, ಒಂದು ವೇಳೆ ರಾಮದಾಸ್ ಸ್ಪರ್ಧಿಸಿದ್ದೇ ಆದರೆ ಅವರ ವಿರುದ್ಧ ಪ್ರೇಮಕುಮಾರಿ ಅವರನ್ನು ಕಣಕ್ಕಿಳಿಸುವ ಪ್ರಯತ್ನಗಳು ನಡೆದಿವೆ. ಉಪೇಂದ್ರ ಅವರ ಕೆಪಿಜೆಪಿ ಹಾಗೂ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Facebook Comments

Sri Raghav

Admin