ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಷದ ರಸ ಒಬ್ಬನನ್ನು ಕೊಲ್ಲುತ್ತದೆ. ಶಸ್ತ್ರದಿಂದ ಒಬ್ಬನು ಮಾತ್ರ ಸಾಯುತ್ತಾನೆ. ಆದರೆ ಕೆಟ್ಟ ಮಂತ್ರಾಲೋಚನೆಯ ಪ್ರಯೋಗ ಪ್ರಜೆಗಳು ಮತ್ತು ರಾಜ್ಯ ಇವುಗಳೊಡನೆ ಕೂಡಿದ ರಾಜನನ್ನು ನಾಶಪಡಿಸುತ್ತದೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶನಿವಾರ 16.12.2017

ಸೂರ್ಯಉದಯ ಬೆ.6.34 / ಸೂರ್ಯ ಅಸ್ತ ಸಂ.5.56
ಚಂದ್ರ ಅಸ್ತ / ಸಂ.04.39 / ಚಂದ್ರ ಉದಯ ರಾ.05.36
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ಬೆ.07.11)
ನಕ್ಷತ್ರ: ಅನೂರಾಧ (ರಾ.04.13) / ಯೋಗ: ಧೃತಿ (ರಾ.02.14)
ಕರಣ: ವಣಿಜ್-ಭದ್ರೆ (ಬೆ.07.11-ರಾ.08.18)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ಧನುಸ್ಸು / ತೇದಿ: 01

ದಿನದ ವಿಶೇಷ: ಮಾಸ ಶಿವರಾತ್ರಿ

ರಾಶಿ ಭವಿಷ್ಯ :

ಮೇಷ : ಪರೋಪಕಾರ ಮಾಡಲು ಹೋಗಿ ವಾಹನ ಕಳೆದುಕೊಳ್ಳುವಿರಿ, ಭಯ ಭ್ರಾಂತರಾಗುವಿರಿ
ವೃಷಭ : ಕುಟುಂಬ ಜೀವನ ಉತ್ತಮವಾಗಿರುವುದು
ಮಿಥುನ: ಪ್ರಭುಗಳಿಂದ ಅಥವಾ ಸರ್ಕಾರ, ಸೊಸೈಟಿ, ಬ್ಯಾಂಕ್‍ಗಳಿಂದ ಹಣ ಬರುವ ಸಂಭವವಿದೆ
ಕಟಕ : ಮಠ-ದೇವಸ್ಥಾನಗಳಿಗೆ ಹೋಗುವಿರಿ
ಸಿಂಹ: ಶತ್ರುಗಳು ಕೊಡುವ ಕಷ್ಟಗಳನ್ನು ಸ್ವಂತ ಬುದ್ಧಿಯಿಂದ ನಿವಾರಣೆ ಮಾಡಿಕೊಳ್ಳುವಿರಿ
ಕನ್ಯಾ: ಮನೆಯಲ್ಲಿ ಸ್ತ್ರೀಯರ ಪ್ರಭಾವ ಹೆಚ್ಚಾಗಿರುವುದು, ಸ್ವಲ್ಪ ಮಟ್ಟಿನ ಕೋಪವಿರುವುದು
ತುಲಾ: ದಾನ ಮಾಡಿ ಕಷ್ಟ ದೂರ ಮಾಡಿಕೊಳ್ಳುವಿರಿ, ವಾಹನ ಸೌಖ್ಯವಿರುವುದು
ವೃಶ್ಚಿಕ: ಶತ್ರುಗಳ ಮೂಲಕ ಏನಾದರೊಂದು ತೊಂದರೆ ಬರುತ್ತಲೇ ಇರುವುದು
ಧನುಸ್ಸು: ಮಕ್ಕಳಿಗೆ ತೊಂದರೆ ಇರುವುದು
ಮಕರ: ನಿಮ್ಮ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ
ಕುಂಭ: ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ
ಮೀನ: ಕೋರ್ಟು, ಕಚೇರಿ ಮೆಟ್ಟಿಲು ಹತ್ತುವ ಸಂದರ್ಭಗಳಿರುವುವು, ಅನಾರೋಗ್ಯಕ್ಕೆ ತುತ್ತಾಗುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin