ಗನ್ ಖರೀದಿಸಲು ಮುಂದಾದ ಸಂಸದೆ ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

shobhakarandlaje

ಬೆಂಗಳೂರು,ಡಿ.16- ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕ ರಂದ್ಲಾಜೆ ಅವರು ಆತ್ಮರಕ್ಷಣೆಗಾಗಿ ಗನ್ ಖರೀದಿಸಲು ಮುಂದಾಗಿದ್ದಾರೆ.ಬಿಜೆಪಿಯಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿರುವ ಶೋಭಾ ಕರಂದ್ಲಾಜೆ, ಆತ್ಮರಕ್ಷಣೆಗಾಗಿ ಗನ್ ಖರೀದಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಗನ್ ಪರವಾನಿಗೆಗಾಗಿ ವೈದ್ಯಕೀಯ ತಪಾಸಣೆಯನ್ನು ಪೂರ್ಣಗೊಳಿಸಿದ್ದಾರೆ. ಗನ್ ಖರೀದಿ ಸಂಬಂಧ ಶೋಭಾ ಈಗಾಗಲೇ ಎಲ್ಲಾ ದಾಖಲಾತಿಗಳನ್ನು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ನೀಡಿದ್ದಾರೆ.  ಇನ್ನೊಂದು ಅಥವಾ ಎರಡು ವಾರದಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಸಿಗುವ ಸಾಧ್ಯತೆಯಿದ್ದು, ಇಲಾಖೆಯಿಂದ ಅನುಮತಿ ಸಿಕ್ಕ ಬಳಿಕ ಶೋಭಾ ಕರಂದ್ಲಾಜೆ ಗನ್ ಖರೀದಿಸಲಿದ್ದಾರೆ.

Facebook Comments

Sri Raghav

Admin