ಮತ್ತೊಂದು ಸರಣಿ ಗೆಲುವಿನತ್ತ ಭಾರತ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Dhoni--02

ವಿಶಾಖಪಟ್ಟಣಂ, ಡಿ.16-ಭಾರತ ಮತ್ತು ಶ್ರೀಲಂಕಾ ನಡುವೆ ನಾಳೆ ಮೂರನೇ ಮತ್ತು ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆಂಧ್ರಪ್ರದೇಶದ ವಿಖಾಖಪಟ್ಟಣಂ ಸಜ್ಜಾಗಿದೆ. ಗೆಲುವುಗಳ ಜೈತ್ರಯಾತ್ರೆ ಮುಂದುವರಿಸಿರುವ ಭಾರತ ತಂಡ ಮತ್ತೊಂದು ಸರಣಿ ಜಯದತ್ತ ಕಣ್ಣಿಟ್ಟಿದೆ. 1 -1 ಸಮಬಲದಲ್ಲಿರುವ ಭಾರತ ಮತ್ತು ಶ್ರೀಲಂಕಾಕ್ಕೆ ನಾಳೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಮಾಡು ಇಲ್ಲವೇ ಮಡಿ ಎಂಬ ಸವಾಲು ಎದುರಾಗಿದೆ.

2015ರ ಅಕ್ಟೋಬರ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪರಾಭವಗೊಂಡಿದ್ದನ್ನು ಹೊರತುಪಡಿಸಿದರೆ, ಈವರೆಗೆ ಭಾರತ ತನ್ನ ನೆಲದಲ್ಲಿ ಒಂದೇ ಒಂದು ಸರಣಿಯಲ್ಲೂ ಸೋತಿಲ್ಲ. ಹೀಗಾಗಿ ನಾಳೆಯ ಪಂದ್ಯದಲ್ಲಿ ಭಾರತ ಗೆಲುವಿನ ನೆಚ್ಚಿನ ತಂಡ ಎನಿಸಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಲಂಕಾ ತಂಡಕ್ಕೆ ಶರಣಾಗಿದ್ದ ಭಾರತ ಎರಡನೇ ಪಂದ್ಯದಲ್ಲಿ ಅದ್ಭುತ ಆಟದೊಂದಿಗೆ ಸಿಂಹಳೀಯರಿಗೆ ಸಿಂಹಸ್ವಪ್ನವಾಯಿತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿ ವಿಶ್ವದಾಖಲೆಯೊಂದಿಗೆ ಅಮೋಘ ಗೆಲುವಿಗೆ ಕಾರಣರಾದರು.

ಮದುವೆ ಮತ್ತು ಮಧುಚಂದ್ರದ ಗುಂಗಿನಲ್ಲಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಬ್ಲೂಬಾಯ್ಸ್ ದಿಟ್ಟ ಆಟ ಪ್ರದರ್ಶಿಸಿ ಶ್ರೀಲಂಕಾದೊಂದಿಗೆ ಸಮಬಲ ಸಾಧಿಸಿದ್ದು, ನಾಳೆಯ ಅಂತಿಮ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ. ನಾಳೆ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

Facebook Comments

Sri Raghav

Admin