ಕಿಚ್ಚನ ಮನೆಗೆ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Sudeep--01

ಬೆಂಗಳೂರು. ಡಿ. 17 : ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಮನೆಗೆ ಬಂದ ಕುಮಾರಸ್ವಾಮಿ ಅವರನ್ನು ಬಹಳ ಸಂತಸದಿಂದ ಬರಮಾಡಿಕೊಂಡ ಕಿಚ್ಚ, ತನ್ನ ಕೈಯಾರೆ ಅಡುಗೆ ಮಾಡಿ ಕುಮಾರಸ್ವಾಮಿ ಅವರಿಗೆ ಬಡಿಸಿದರು. 2 ಗಂಟೆಗಳ ಕಾಲ ಊಟ ಮಾಡುತ್ತಾ ಇಬ್ಬರು ಆತ್ಮೀಯವಾಗಿ ಮಾತುಕತೆ ನಡೆಸಿದರು. ಸ್ವತಃ ಕಿಚ್ಚ ಸುದೀಪ್ ಅವರೇ ಅಡುಗೆ ಮಾಡಿ ಕುಮಾರಸ್ವಾಮಿ ಅವರಿಗೆ ಉಣಬಡಿಸಿದ್ದು ವಿಶೇಷವಾಗಿತ್ತು.
ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಕಿಚ್ಚ ಶುಭ ಕೋರಿದ್ದರು.

Facebook Comments

Sri Raghav

Admin