ಭಾರತೀಯ ಅಧಿಕಾರಿಗಳ ಹನಿಟ್ರಾಪ್‍ಗೆ ಪಾಕ್ ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Haney-Trap--01

ನವದೆಹಲಿ/ಇಸ್ಲಾಮಾಬಾದ್, ಡಿ.17-ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈ ಕಮಿಷನ್‍ನ ಮೂವರು ಅಧಿಕಾರಿಗಳಿಂದ ಅತ್ಯಂತ ಸೂಕ್ಷ್ಮ ಮಾಹಿತಿ ಪಡೆಯಲು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್(ಐಎಸ್‍ಐ) ಅವರನ್ನು ಹನಿಟ್ರಾಪ್‍ಗೆ(ಮೋಹದ ಬಲೆ) ಕೆಡವಿಕೊಳ್ಳಲು ವಿಫಲ ಯತ್ನ ನಡೆಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿರುವುದರಿಂದ ಆ ಮೂವರು ಅಧಿಕಾರಿಗಳ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಐಎಸ್‍ಐನ ಈ ಕುತಂತ್ರ ಬಹಿರಂಗಗೊಳ್ಳುತ್ತಿದ್ದಂತೆ ಆ ಅಧಿಕಾರಿಗಳನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ಇಸ್ಲಾಮಾಬಾದ್‍ನಿಂದ ಭಾರತಕ್ಕೆ ಹಿಂದಿರುಗಿರುವ ಈ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ. ಅವರನ್ನು ಮತ್ತೆ ಪಾಕಿಸ್ತಾನದಲ್ಲಿ ಸೇವೆಗೆ ನಿಯೋಜಿಸುವ ಸಾಧ್ಯತೆ ಇಲ್ಲ ಎಂದು ಉನ್ನತ ಮೂಲಗಳು ಹೇಳಿವೆ.

ಪಾಕಿಸ್ತಾನದ ಸುಂದರಿಯರನ್ನು ಬಳಸಿಕೊಂಡು ಇಂಡಿಯನ್ ಹೈ ಕಮಿಷನ್‍ನ ಅಧಿಕಾರಿಗಳನ್ನು ಹನಿಟ್ರಾಪ್‍ನಲ್ಲಿ ಕೆಡವಿಕೊಂಡು ರಹಸ್ಯ ಮಾಹಿತಿ ಪಡೆಯಲು ಐಎಸ್‍ಐ ವ್ಯವಸ್ಥಿತ ಜಾಲವನ್ನು ಹೆಣೆದಿತ್ತು. ಆದರೆ ಚಾಣಾಕ್ಷ ಅಧಿಕಾರಿಗಳು ಈ ಬಲೆಗೆ ಬೀಳದೇ ಪಾಕ್ ಬೇಹುಗಾರಿಕೆ ಸಂಸ್ಥೆಯ ಕುತಂತ್ರದಿಂದ ಪಾರಾಗಿದ್ದಾರೆ. ಅಲ್ಲದೆ, ಯಾವುದೇ ಸೂಕ್ಷ್ಮ ಮಾಹಿತಿಗಳೂ ಪಾಕಿಸ್ತಾನಕ್ಕೆ ಲಭಿಸದಂತೆ ಎಚ್ಚರ ವಹಿಸಿದ್ದಾರೆ. ಬೇಹುಗಾರಿಕೆ ಸಂಸ್ಥೆಗಳು ಮಾದಕ ಮಹಿಳೆಯರನ್ನು ಬಳಸಿಕೊಂಡು ವೈರಿ ರಾಷ್ಟ್ರದ ಮಾಹಿತಿಗಳನ್ನು ಕಲೆಹಾಕುವ ಪರಿಪಾಠವನ್ನು ವಿಶ್ವದ ಎಲ್ಲ ದೇಶಗಳೂ ಅನುಸರಿಸುತ್ತಿವೆ. ಇದೇ ತಂತ್ರವನ್ನು ಐಎಸ್‍ಐ ಭಾರತದ ವಿರುದ್ಧ ಹೆಣೆದಿದ್ದರೂ ಅದು ವಿಫಲವಾಗಿದೆ.

Facebook Comments

Sri Raghav

Admin