ರೇಪಿಸ್ಟ್ ಅಸಾರಾಮ್ ಕಾಲಿಗೆ ಬಿದ್ದ ನಿವೃತ್ತ ಮುಖ್ಯ ನ್ಯಾಯಾಧೀಶ..!

ಈ ಸುದ್ದಿಯನ್ನು ಶೇರ್ ಮಾಡಿ

Bapu--01

ಜೋದ್‍ಪುರ, ಡಿ.17-ಸಿಕ್ಕಿಂ ಹೈಕೋಟ್‍ನ ನಿವೃತ್ತ ಮುಖ್ಯ ನ್ಯಾಯಾಧೀಶರೊಬ್ಬರು ಭೂತಚೇಷ್ಟೆ ಬಿಡಿಸುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ಅಸಾರಾಮ್ ಬಾಪು ಕಾಲಿಗೆ ಬಿದ್ದು ನಮಸ್ಕರಿಸಿರುವ ಘಟನೆ ಇದೀಗ ವಿವಾದಕ್ಕೀಡಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ. ಅಸಾರಾಮï ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ ಪ್ರತಿದಿನ ಜೋಧ್‍ಪುರ್ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯೂ ಅಸಾರಾಮ್‍ನನ್ನು ಕೋರ್ಟ್‍ಗೆ ಕರೆ ತರಲಾಗಿತ್ತು. ಈ ವೇಳೆ ಮಾಜಿ ಮುಖ್ಯ ನ್ಯಾಯಾಧೀಶರು ಸ್ವಯಂಘೋಷಿತ ದೇವಮಾನವನ ಕಾಲಿಗೆ ಬಿದ್ದಿದ್ದು, ಇದರ ವಿಡಿಯೋ ಹಾಗು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲï ಆಗಿದೆ.

Facebook Comments

Sri Raghav

Admin