ರೋಗಿಯ ಜೀವಕ್ಕೆ ಕಲ್ಲು ಹಾಕಿದ ಹಲ್ಲಿನ ಡಾಕ್ಟರ್..!

ಈ ಸುದ್ದಿಯನ್ನು ಶೇರ್ ಮಾಡಿ

Doctor--01

ಹುಬ್ಬಳ್ಳಿ, ಡಿ.17-ದಂತ ವೈದ್ಯನ ಎಡವಟ್ಟಿನಿಂದಾಗಿ ರೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಹಲ್ಲು ನೋವು ಎಂದು ಚಿಕಿತ್ಸೆಗೆ ಬಂದವನ ಮೂರು ಹಲ್ಲುಗಳನ್ನು ಕಿತ್ತಿದ್ದ ವೈದ್ಯ ನಿರ್ಲಕ್ಷ್ಯ ತೋರಿದ್ದರು. ಇದರಿಂದಾಗಿ ಗಣೇಶಪೇಟೆಯ ಅಬ್ದುಲ್ ಖಾದರ್ ಬಾಗಲಕೋಟೆ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.  ನಗರದ ರತ್ನ ಡೆಂಟಲ್ ಕ್ಲಿನಿಕ್‍ನ ದಂತ ವೈದ್ಯ ಡಾ.ವೀರೇಶ್ ಮಾಗಳದ ಎಡವಟ್ಟಿನಿಂದ ರೋಗಿ ಬಲಿಯಾಗಬೇಕಾಯಿತು.

ಮೂರು ಹಲ್ಲು ಕಿತ್ತಾಗ ಅನಾರೋಗ್ಯಗೊಂಡ ಖಾದರ್ ಕುಟುಂಬಕ್ಕೆ 10 ಸಾವಿರ ರೂ. ನೀಡಿ ವೈದ್ಯ ಡಾ.ವೀರೇಶ್ ಮಾಗಳದ ಅವರನ್ನು ಸಾಗಹಾಕಿದ್ದರು. ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನಾರೋಗ್ಯಕ್ಕೆ ವೈದ್ಯರು ಹೊಣೆಯಲ್ಲ ಎಂದು ಪತ್ರ ಬರೆಸಿ ಹೆಬ್ಬಟ್ಟು ಸಹಿ ಸಹ ಮಾಡಿಸಿಕೊಂಡಿದ್ದರು ಈ ಡಾಕ್ಟರ್.
ಖಾದರ್ ಅವರು ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು , ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೋಗಿ ಸಂಬಂಧಿಗಳು ಒತ್ತಾಯಿಸಿದ್ದಾರೆ. ಈ ಸಂಬಂಧ ಸಹಪುರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin