ಮಡಿಕೇರಿಯಲ್ಲಿ ಬೀಡು ಬಿಟ್ಟ ‘ಬೈಲಾ’ ಚಿತ್ರ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

baila

ಬಾರಿಕೆ ಬ್ರದರ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಭಾಕರ್ ಭಟ್, ವಾಸುದೇವ ಪ್ರಸಾದ್ ಮತ್ತು ದೇವಿಪ್ರಸಾದ್ ನಿರ್ಮಿಸುತ್ತಿರುವ ಬೈಲಾ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣೇಶನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ಮಾಪಕ ದೇವಿಪ್ರಸಾದ್ ಸಜಂಕು ಆರಂಭ ಫಲಕ ತೋರಿದರು. ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮಡಿಕೇರಿಯಲ್ಲಿ ಬಿರುಸಿನಿಂದ ಸಾಗಿದೆ.

ಗಣೇಶ್ ಪಿಲಿಕಲ್ಲು, ಸೋಮಶೇಖರ್ ಬಾರಿಕೆ ಹಾಗೂ ಆರ್.ಎನ್.ಆರ್ ನಿರ್ದೇಶನದ ಈ ಚಿತ್ರಕ್ಕೆ ಗಣೇಶ್ ಪಿಲಿಕಲ್ಲು ಕಥೆ ಬರೆದಿದ್ದಾರೆ. ಗಣೇಶ್ ಪಿಲಿಕಲ್ಲು, ಸೋಮಶೇಖರ್ ಬಾರಿಕೆ ಹಾಗೂ ಆರ್.ಎನ್.ಆರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಶಶಿಧರ್ ಛಾಯಾಗ್ರಹಣ, ಮನೋಜ್ ಜಿ.ಎಸ್.ಶ್ರೀಲಂಕಾ ಸಂಗೀತ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಗಣೇಶ್ ಪಿಲಿಕಲ್ಲು ರಚಿಸಿದ್ದಾರೆ. ರಾಜೇಶ್ ನಟರಂಗ, ಶೋಭ್‍ರಾಜ್, ತೇಜಸ್ವಿನಿ ಶರ್ಮ, ಧರಣಿ, ಸೋಮಶೇಖರ್ ಬಾರಿಕೆ, ಮನ್‍ದೀಪ್ ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Facebook Comments