ಶೀಲ ಶಂಕಿಸಿ ಪತ್ನಿಗೆ ಬೆಂಕಿ ಹಚ್ಚಿ ಪರಾರಿಯಾದ ಅನುಮಾನ ಪಿಶಾಚಿ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Women-Fire--01

ದಾವಣಗೆರೆ, ಡಿ.19- ಅನುಮಾನ ಪಿಶಾಚಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಹರಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ಪೈಶಾಚಿಕ ಕೃತ್ಯಕ್ಕೆ ಒಳಗಾಗಿರುವ ಪತ್ನಿಯನ್ನು ಲಕ್ಷ್ಮೀಬಾಯಿ ಎಂದು ಗುರುತಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.  ನಂದಿಬೇವೂರ ಗ್ರಾಮದ ತಿಪ್ಪಾನಾಯ್ಕ ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಶೀಲದ ಮೇಲೆ ಪದೇ ಪದೇ ಶಂಕೆ ವ್ಯಕ್ತಪಡಿಸುತ್ತಿದ್ದ.

ಪತಿಯ ಈ ಧೋರಣೆಯಿಂದ ಬೇಸತ್ತ ಲಕ್ಷ್ಮೀಬಾಯಿ ಇತ್ತೀಚೆಗೆ ತವರು ಮನೆ ಸೇರಿಕೊಂಡು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಇನ್ನು ಮುಂದೆ ನಿನ್ನ ಮೇಲೆ ಅನುಮಾನ ಪಡಲ್ಲ, ಮನೆಗೆ ಬಾ ಎಂದು ಪುಸಲಾಯಿಸಿ ತವರು ಮನೆಯಿಂದ ಲಕ್ಷ್ಮೀಬಾಯಿಯನ್ನು ಮನೆಗೆ ಕರೆತಂದ ತಿಪ್ಪಾನಾಯ್ಕ, ಪತ್ನಿ ಮೇಲೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಅಕ್ಕಪಕ್ಕದವರು ಬೆಂಕಿ ನಂದಿಸಿ ಲಕ್ಷ್ಮೀಬಾಯಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹರಪ್ಪನಹಳ್ಳಿ ಪೊಲೀಸರು ಪರಾರಿಯಾಗಿರುವ ತಿಪ್ಪಾನಾಯ್ಕನಿಗಾಗಿ ಶೋಧ ಮುಂದುವರಿಸಿದ್ದಾರೆ.

Facebook Comments

Sri Raghav

Admin