ಸಂಸದ ಶ್ರೀರಾಮುಲು ದೆಹಲಿ ನಿವಾಸದಲ್ಲಿ ಆಕಸ್ಮಿಕ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Sriramulu--01

ನವದೆಹಲಿ, ಡಿ.19-ಬಿಜೆಪಿ ಸಂಸದ ಶ್ರೀರಾಮುಲು ಅವರ ದೆಹಲಿ ನಿವಾಸದಲ್ಲಿಂದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ನವದೆಹಲಿಯ ಫಿರೋಜ್ ಷಾ ಮೈದಾನದಲ್ಲಿರುವ ಅವರ ನಿವಾಸದಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು, ಈ ಸಂದರ್ಭದಲ್ಲಿ ಶ್ರೀರಾಮುಲು ಮತ್ತು ಅವರ ಸಂಬಂಧಿಕರು ಮನೆಯಲ್ಲೇ ಇದ್ದರು. ಯಾವುದೇ ಅಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin