ಇದ್ದಕ್ಕಿದ್ದಂತೆ ಹೊತ್ತಿ ಉರಿದ 5 ಬೈಕ್ ಗಳು

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಬೆಂಗಳೂರು, ಡಿ.20- ಮನೆಯೊಂದರ ಬಳಿ ನಿಲ್ಲಿಸಲಾಗಿದ್ದ ಐದು ಬೈಕ್‍ಗಳು ಹೊತ್ತಿ ಉರಿದು ಭಾಗಶಃ ಹಾನಿಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾರ್ವೆಬಾವಿಪಾಳ್ಯದ ಮೊದಲನೆ ಕ್ರಾಸ್ ಲಕ್ಷ್ಮೀ ಲೇಔಟ್‍ನ ನಿವಾಸಿ ನವೀನ್ ಎಂಬುವರ ಮನೆ ಬಳಿ ಐದು ಬೈಕ್‍ಗಳನ್ನು ರಾತ್ರಿ ನಿಲ್ಲಿಸಲಾಗಿತ್ತು. ತಡರಾತ್ರಿ 11.30ರಲ್ಲಿ ಈ ಬೈಕ್‍ಗಳು ಬೆಂಕಿಯಿಂದ ಹೊತ್ತಿ ಉರಿದಿದ್ದು, ಕಾರಣ ತಿಳಿದುಬಂದಿಲ್ಲ.  ತಕ್ಷಣ ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿ ಬೇಗೂರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆಯೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

Facebook Comments

Sri Raghav

Admin