ದಾವೂದ್ ಬಲಗೈ ಭಂಟ ಛೋಟಾ ಶಕೀಲ್ ನಿಗೂಢ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Chota-Shakeel--01-Dawood

ಇಸ್ಲಮಾಬಾದ್, ಡಿ.20- ಕುಪ್ರಸಿದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರಮಾಪ್ತ ಭಂಟನೆಂದೇ ಕುಖ್ಯಾತನಾದ ಛೋಟಾ ಶಕೀಲ್ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆಂದು ವರದಿಯಾಗಿದೆ. ಆಂಗ್ಲ ಪತ್ರಿಕೆಯೊಂದಕ್ಕೆ ಅಪರಾಧ ಕ್ಷೇತ್ರದ ವ್ಯಕ್ತಿಯೊಬ್ಬ ನೀಡಿರುವ ಈ ಮಾಹಿತಿ ಭೂಗತ ಲೋಕದಲ್ಲಿ ಕುತೂಹಲ ಕೆರಳಿಸಿದೆ.  ಮುಂಬೈನಲ್ಲಿರುವ ಶಕೀಲ್ ಸಂಬಂಧಿಕ ಮತ್ತು ಬಿಲಾಲ್ ಎಂಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ನಡುವೆ ನಡೆದ ಸಂಭಾಷಣೆಯ ಒಂದು ಭಾಗದಿಂದ ಈ ಸಂಗತಿ ಬೆಳಕಿಗೆ ಬಂದಿದೆ.

ಈ ಬಗ್ಗೆ ದೆಹಲಿಯ ಎನ್‍ಎಸ್‍ಸಿ ಅಧಿಕಾರಿಗಳು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.57 ವರ್ಷದ ಶಕೀಲ್ ಕಳೆದ ಜ.6ರಂದೇ ಇಸ್ಲಮಾಬಾದ್‍ನಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಅವನು ಅಲ್ಲಿ ನಡೆದ ಭೂಗತ ಪಾತಕಿಗಳ ಸಭೆಯಲ್ಲಿದ್ದಾಗ ಅವನಿಗೆ ಹೃದಯಾಘಾತವಾಯಿತು. ಅವನ ಅಂಗರಕ್ಷಕರು ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಅಸುನೀಗಿದ ಎಂದು ಒಂದು ಮೂಲಗಳು ಹೇಳಿವೆ.

ಇನ್ನೊಂದು ಮಾಹಿತಿ ಎಂದರೆ ಶಕೀಲ್‍ನನ್ನು ನಿರ್ವಹಿಸಲು ಸಾಧ್ಯವಾಗದೆ ಪಾಕಿಸ್ತಾನದ ಐಎಸ್‍ಐ ಏಜೆಂಟರೇ ಅವನನ್ನು ಕೊಂದು ಹಾಕಿದ್ದಾರೆ. ಈ ಎರಡೂ ಸುದ್ದಿಗಳಲ್ಲಿ ಯಾವುದು ಸತ್ಯ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

Facebook Comments

Sri Raghav

Admin