‘ಕೊರಟಗೆರೆಯಲ್ಲಿ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಸೋಲು ಗ್ಯಾರಂಟಿ’

ಈ ಸುದ್ದಿಯನ್ನು ಶೇರ್ ಮಾಡಿ

parameshwar

ತುಮಕೂರು, ಡಿ.22-ಕೊರಟಗೆರೆ ಮಧುಗಿರಿ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿ,ಸಚಿವರಾಗಿ ಈ ಬಾಗದ ಮತದಾರರಿಗೆ ವಂಚನೆ ಮಾಡಿ ಗೋಸುಂಬೆ ನಡವಳಿಕೆ ಹೊಂದಿರುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಈ ಚುನಾವಣೆಯಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಪಂಚಾಯತ್ ಸದಸ್ಯ ವೈ.ಹೆಚ್.ಹುಚ್ಚಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1989 ರಿಂದ 2 ಬಾರಿ ಮಧುಗಿರಿಯಲ್ಲಿ ಶಾಸಕರಾಗಿ,2008 ರಲ್ಲಿ ಕೊರಟಗೆರೆ ಮೀಸಲು ಕ್ಷೇತ್ರದಿಂದ ಶಾಸಕರಾಗಿ,ಸಚಿವರಾಗಿದ್ದರು.ಈ ಭಾಗದ ರೈತರ,ದಲಿತರ, ಮಹಿಳೆಯರ ಸಮಸ್ಯೆ ಆಲಿಸಿ ಆ ಸಮಸ್ಯೆ ಪರಿಹಾರಕ್ಕೆ ಎಂದೂ ಶ್ರಮ ಪಟ್ಟಿಲ್ಲ.ಆದರೆ ಈಗ ಚುನಾವಣೆ ಹತ್ತಿರವಾಗಿದೆ ಎಂದು ಸಮಾವೇಶದ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇವರು ಮಂತ್ರಿಯಾಗಿದ್ದಾಗ ಮಹಿಳೆಯರ ಸಬಲೀಕರಣಕ್ಕೆ ಯಾವುದೇ ಸಹಾಯ ಮಾಡದೆ,ಮನೆಗೆ ಹೋಗುವ ಕಾಲದಲ್ಲಿ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ.ಇವರ ಕಾರ್ಯ ವೈಖರಿಗೆ ಕೊರಟಗೆರೆ ಕ್ಷೇತ್ರ ಜನ ಶಾಪ ಹಾಕುತ್ತಿದ್ದಾರೆ.ಇವರು ಏನೇ ಅಬ್ಬರದ ಪ್ರಚಾರ ಮಾಡಿದರು ಕೊರಟಗೆರೆ ಮತದಾರ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದಿಲ್ಲ.

ಜನಸಂಖ್ಯೆ ಆಧಾರದಲ್ಲಿ ಮೇಲೆ ಮೀಸಲಾತಿ ನೀಡಬೇಕೆಂದು ಕಳೆದ 20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ಪರಿಣಾಮ ಸದಾಶಿವ ಆಯೋಗ ರಚನೆಯಾಗಿತ್ತು.ಇದರ ಅನ್ವಯ ಮಾದಿಗ ಜನಾಂಗಕ್ಕೆ ಶೇ.6 ರಷ್ಟು, ಛಲವಾಧಿಗೆ ಶೇ.5,ಸ್ಪರ್ಷ ಸಮುದಾಯಕ್ಕೆ ಶೇ.3,ಅಲೆಮಾರಿಗಳಿಗೆ ಶೇ.1 ಬಾಗ ಮೀಸಲಾತಿಯನ್ನು ನೀಡಿದೆ.ಈ ಸದಾಶಿವ ವರದಿಯನ್ನು ಜಾರಿಗೆ ತರಲು ಪರಮೇಶ್ವರ್ ತೀವ್ರ ವಿರೋಧ ಮಾಡಿದ್ದಾರೆ.ಈ ಸಂಬಂಧ ಸಮಾಜ ಕಲ್ಯಾಣ ಮಂತ್ರಿಯವರಿಗೆ ಬೆದರಿಕೆ ಹಾಕಿದ್ದಾರೆ.ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ರಾಜಕೀಯ ಅಧಿಕಾರ ಸಿಗಬಾರದು ಎನ್ನುವುದು ಪರಮೇಶ್ವರ್ ಧೋರಣೆಯಾಗಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವರದಯ್ಯ,ಚಂದ್ರಶೇಖರಯ್ಯ, ಅಯೂಬ್ ಖಾನ್, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin