ಟ್ವೆಂಟಿ-20 ಇತಿಹಾಸದಲ್ಲಿ ಡ್ವೇನ್ ಬ್ರಾವೋ ನೂತನ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

brove
ಹೋಬಾರ್ಟ್, ಡಿ.22- ಕೆರಿಬಿಯನ್‍ನ ವೇಗದ ಬೌಲರ್ ಡ್ವೇನ್‍ಬ್ರಾವೋ ಟ್ವೆಂಟಿ-20 ಇತಿಹಾಸದಲ್ಲಿ 400 ವಿಕೆಟ್‍ಗಳನ್ನು ಕಬಳಿಸುವ ಮೂಲಕ ನೂತನ ದಾಖಲೆಯನ್ನು ಬರೆದಿದ್ದಾರೆ. ಬಿಗ್‍ಬಾಷ್ ಲೀಗ್‍ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್ ರಿನಿಗಾಡ್ಸ್ ತಂಡದ ಪರ ಆಡಿದ ಡ್ವೇನ್ ಬ್ರಾವೋ ಹೋಬಾರ್ಡ್ ಹೆನ್‍ಕ್ಯೂರಿಸ್ ತಂಡದ ಮ್ಯಾಥುವೇಡ್‍ರ ವಿಕೆಟ್ ಕಬಳಿಸುತ್ತಿದ್ದಂತೆ ಬ್ರಾವೋ ಟ್ವೆಂಟಿ-20 ಮಾದರಿ ಕ್ರಿಕೆಟ್‍ನಲ್ಲಿ 364 ಪಂದ್ಯಗಳಿಂದ 400 ವಿಕೆಟ್ ಗಳಿಸಿದ ಮೊದಲ ಬೌಲರ್ ಆಗಿ ಹೊರಹೊಮ್ಮಿದರು.

ಶ್ರೀಲಂಕಾದ ವೇಗದ ಅಸ್ತ್ರ ಲಸಿತ್ ಮಾಲಿಂಗ ( 331 ವಿಕೆಟ್, 248 ಪಂದ್ಯಗಳು), ಕೆರಿಬಿಯನ್ ನಾಡಿನ ಸುನೀಲ್ ನರೇನ್ (307 ವಿಕೆಟ್,ತ 262 ಪಂದ್ಯಗಳು), ಬಾಂಗ್ಲಾದ ಅಲೌಂಡರ್ ಶಕೀಬ್ ಅಲ್ ಹಸನ್ ( 292 ವಿಕೆಟ್, 252 ಪಂದ್ಯಗಳು), ಪಾಕಿಸ್ತಾನದ ಶಹೀದ್ ಆಫ್ರಿದಿ (287 ವಿಕೆಟ್, 265 ಪಂದ್ಯಗಳು) ಟಾಪ್ 5ನಲ್ಲಿ ಗುರುತಿಸಿಕೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin