ಪ್ರೀತಿ ನಿರಾಕರಿಸಿದ್ದಕ್ಕೆ ನಡುರಸ್ತೆಯಲ್ಲೇ ಯುವತಿಗೆ ಬೆಂಕಿ ಹಚ್ಚಿ ಕೊಂದ ಭಗ್ನಪ್ರೇಮಿ..!

ಈ ಸುದ್ದಿಯನ್ನು ಶೇರ್ ಮಾಡಿ

suicide--v01

ಹೈದರಾಬಾದ್, ಡಿ.22- ತನ್ನ ಪ್ರೀತಿ ನಿರಾಕರಿಸಿದ್ದಕ್ಕಾಗಿ ಕುಪಿತಗೊಂಡ ಭಗ್ನಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಯುವತಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಸಂಧ್ಯಾರಾಣಿ(25) ಎಂಬಾಕೆ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ನರರಾಕ್ಷಸ ಭಗ್ನಪ್ರೇಮಿ ಕಾರ್ತಿಕ್(28) ಎಂಬಾತನನ್ನು ಬಂಧಿಸಲಾಗಿದೆ.

ಬಾಲಗುಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದ ಈ ಘಟನೆ ತೆಲಂಗಾಣ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಸಂಧ್ಯಾರಾಣಿ ಮತ್ತು ಕಾರ್ತಿಕ್ ನಡುವೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಕಾರ್ತಿಕ್ ಸಂಧಾರಾಣಿಯನ್ನು ಪ್ರೀತಿಸುತ್ತಿದ್ದ. ಆದರೆ ಆತನ ಪ್ರೀತಿಯನ್ನು ಆಕೆ ನಿರಾಕರಿಸಿದ್ದರು. ಆಕೆಯೊಂದಿಗೆ ಮಾತನಾಡಲು ಹೈದರಾಬಾದ್‍ನಿಂದ 10 ಕಿ.ಮೀ.ದೂರದಲ್ಲಿರುವ ಸಿಕಂದರಾಬಾದ್‍ನ ಬಾಲಗುಡಾ ಪ್ರದೇಶಕ್ಕೆ ಕರೆಸಿಕೊಂಡಿದ್ದ ಆರೋಪಿ ಸಂಧ್ಯಾ ಜೊತೆ ಜಗಳವಾಡಿದ. ಆಕೆ ಕಾರ್ತಿಕ್‍ನನ್ನು ನಿಂದಿಸಿದರು. ಇದರಿಂದ ಕುಪಿತಗೊಂಡ ಕಾರ್ತಿಕ್ ನಡುರಸ್ತೆಯಲ್ಲೇ ಸಾರ್ವಜನಿಕರ ಮುಂದೆಯೇ ಆಕೆಯ ಮೈಮೇಲೆ ಪೆಟೋಲ್ ಸುರಿದು ಬೆಂಕಿ ಹಚ್ಚಿದ. ಶೇ.60ರಷ್ಟು ಸುಟ್ಟಗಾಯಗಳಾಗಿದ್ದ ಆಕೆಯನ್ನು ಸಾರ್ವಜನಿಕರು ತಕ್ಷಣ ಸಿಕಂದರಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 7.30ರಲ್ಲಿ ಕೊನೆಯುಸಿರೆಳೆದರು ಎಂದು ಉಪ ಪೊಲೀಸ್ ಆಯುಕ್ತರಾದ (ಉತ್ತರ ವಲಯ) ಬಿ.ಸುಮತಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಸಂಧ್ಯಾಳ ಶವನ್ನು ಪೊೀಷಕರಿಗೆ ಹಸ್ತಾಂತರಿಸಲಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕೃತ್ಯವನ್ನು ಬಿಜೆಪಿ ಮುಖಂಡ ಬಂಡಾರು ದತ್ತಾತ್ರೇಯ ಸೇರಿದಂತೆ ಅನೇಕ ಗಣ್ಯರು ಖಂಡಿಸಿದ್ದಾರೆ. ಭಗ್ನಪ್ರೇಮಿಯ ಭೀಕರ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Facebook Comments

Sri Raghav

Admin