ಸರ್ಕಾರಿ ನೌಕರರಿಗೆ ಐಡಿ ಕಾರ್ಡ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ID-Card--01

ಮೈಸೂರು, ಡಿ.22-ಜನವರಿ 1 ರಿಂದ ಸರ್ಕಾರಿ ನೌಕರರಿಗೆ ಗುರುತಿನ ಕಾರ್ಡ್ ಕಡ್ಡಾಯ ಮಾಡಲಾಗಿದೆ.  ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ರಾಜ್ಯಸರ್ಕಾರದ ಎಲ್ಲಾ ಇಲಾಖಾ ಕಚೇರಿಗಳಲ್ಲಿ ಎಲ್ಲಾ ಸಿಬ್ಬಂದಿಗಳು ಗುರುತಿನ ಕಾರ್ಡ್ ಹೊಂದಿರಬೇಕೆಂದು ಜಿಲ್ಲಾಧಿಕಾರಿ ರಂದೀಪ್ ಸೂಚಿಸಿದ್ದಾರೆ.   ಡಿ.31ರೊಳಗೆ ಗುರುತಿನ ಕಾರ್ಡ್‍ಗಳನ್ನು ಆಯಾ ಇಲಾಖೆಗಳು ತಮ್ಮ ಕಚೇರಿ ಸಿಬ್ಬಂದಿಗೆ ನೀಡುವಂತೆ ಡಿಸಿ ಸೂಚನೆ ನೀಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ನೌಕರರಲ್ಲದವರು ಕುಳಿತಿರುತ್ತಾರೆ ಎಂಬ ದೂರಿನನ್ವಯ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಜನವರಿ 1 ರಿಂದ ಎಲ್ಲಾ ಸಿಬ್ಬಂದಿ ಗುರುತಿನ ಕಾರ್ಡ್ ಹೊಂದಿರಬೇಕು. ಹೊರಗುತ್ತಿಗೆ ನೌಕರರಾಗಿದ್ದಲ್ಲಿ ಅವರಿಗೂ ಸಹ ಹೊರಗುತ್ತಿಗೆ ನೌಕರರೆಂಬ ಗುರುತಿನ ಕಾರ್ಡ್ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ಹಿಂದೆ ಇದ್ದಂತಹ ಬಯೋಮೆಟ್ರಿಕ್ ಹಾಜರಾತಿಗಳನ್ನು ಕಚೇರಿಗಳಲ್ಲಿ ಅಳವಡಿಸುವ ಜತೆಗೆ ಇದೀಗ ಸರ್ಕಾರಿ ಕಚೇರಿಗಳಲ್ಲಿ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಕೆಲಸ ನಿರ್ವಹಿಸುವಂತೆ ಜಿಲ್ಲಾಡಳಿತ ಸೂಚಿಸುವ ಮೂಲಕ ಕಚೇರಿ ಮೂಲಕವೇ ನೌಕರರಲ್ಲಿ ಶಿಸ್ತು ಮೂಡಿಸಲು ಮುಂದಾಗಿದೆ. ಗುರುತಿನ ಚೀಟಿ ಕಡ್ಡಾಯದಿಂದ ಬೇರೆಯವರು ಕಚೇರಿ ಒಳಗೆ ಬಂದು ಕುಳಿತು ಸಮಯ ಕಳೆಯುವವರನ್ನು ತಡೆಗಟ್ಟಲು ಹಾಗೂ ಕಚೇರಿಗೆ ಬರುವ ಸಾರ್ವಜನಿಕರಿಗೆ ಕಚೇರಿಯ ನೌಕರರನ್ನು ಗುರುತಿಸಿ ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ. ಒಟ್ಟಾರೆ ಈವರೆಗೂ ಗುರುತಿನ ಚೀಟಿ ಹಾಕಿಕೊಳ್ಳುವ ಪದ್ದತಿ ಇದ್ದರೂ ಅದನ್ನು ಕಡ್ಡಾಯಗೊಳಿಸಿರುವುದರಿಂದ ಹೆಚ್ಚು ಉಪಯುಕ್ತವಾಗಲಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Facebook Comments

Sri Raghav

Admin