ನೂತನ ವರ್ಷಾಚರಣೆಗೆ ಸೂಕ್ತ ಭದ್ರತೆ : ಪೊಲೀಸ್ ಆಯುಕ್ತ ಸುನೀಲ್‍ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Suneel-Kuamr--01

ಬೆಂಗಳೂರು, ಡಿ.23-ಪ್ರತಿವರ್ಷದಂತೆ ಈ ಬಾರಿಯೂ ನೂತನ ವರ್ಷಾಚರಣೆಗೆ ಸೂಕ್ತ ಭದ್ರತೆಗೆ ಕ್ರಮವಹಿಸಲಾಗುವುದು. ಈ ಸಂಬಂಧ 26 ರಂದು ನಡೆಯಲಿರುವ ಸಭೆ ನಂತರ ನೋಟಿಸ್ ಜಾರಿಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದ್ದಾರೆ. ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‍ಗಳಿಗೆ ಆಗಮಿಸಿ ನೂತನ ವರ್ಷಾಚರಣೆ ಮಾಡಲು ಒಂದು ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಆದರೆ ಈ ಬಾರಿ ಬ್ರಿಗೇಡ್ ರಸ್ತೆಯಲ್ಲಿ ಟೆಂಡರ್‍ಶ್ಯೂರ್ ಕಾಮಗಾರಿ ನಡೆಯುತ್ತಿರುವುದರಿಂದ ಜಾಗ ಮತ್ತಷ್ಟು ಕಿರಿದಾಗಿದೆ. ಹಾಗಾಗಿ ಇಲ್ಲಿ ಬಂದು ತೊಂದರೆ  ಅನುಭವಿಸಬೇಡಿ ಎಂದು ಹೇಳಿದರು.

ಈ ರಸ್ತೆಗಳಲ್ಲಿ ವರ್ಷಾಚರಣೆ ಸಂದರ್ಭದಲ್ಲಿ ಸಾಕಷ್ಟು ನೂಕುನುಗ್ಗಲಿರುತ್ತದೆ. ಅಲ್ಲಿಗೆ ಬರಲೇಬೇಕೆಂದೇನು ಇಲ್ಲ. ಇದ್ದ ಕಡೆಯೇ ವರ್ಷಾಚರಣೆ ಮಾಡಿ ಎಂದು ಸಲಹೆ ಮಾಡಿದರು. ಕಳೆದ ವರ್ಷ ಒಂದು ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿತ್ತು. ಈ ಬಗ್ಗೆ ಪೊಲೀಸರು ಟಿಟಿ ಟಿವಿ ಫುಟೇಜ್‍ಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಂತಹ ಪ್ರಕರಣವೇ ನಡೆದಿರಲಿಲ್ಲ. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗಿತ್ತು. ಈ ಬಗ್ಗೆ ಪೊಲೀಸರು ಕ್ರಮವಹಿಸಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಿಂದಿನ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿ ಕ್ರಮ ವಹಿಸಲಿದ್ದೇವೆ. ಸೂಕ್ತ ಭದ್ರತೆಯೊಂದಿಗೆ ವರ್ಷಾಚರಣೆ ನಡೆಯಲಿದೆ.

Facebook Comments

Sri Raghav

Admin