‘ಮಹದಾಯಿ ವಿವಾದದಲ್ಲಿ ಬಿಜೆಪಿ ನಾಯಕರು ಮಹಾನ್ ಕಲಾವಿದರಂತೆ ವರ್ತಿಸುತ್ತಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--02

ಬೆಂಗಳೂರು, ಡಿ.23-ಮಹದಾಯಿ ವಿವಾದದಲ್ಲಿ ಬಿಜೆಪಿ ನಾಯಕರು ಮಹಾನ್ ಕಲಾವಿದರ ತಂಡದಂತೆ ವರ್ತಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು. ಜಿಕೆವಿಕೆ ಆವರಣದಲ್ಲಿ ಪೂರ್ವ ವಿಭಾಗ ಪೊಲೀಸರು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಲುಗಳ ಪ್ರದರ್ಶನದ ಸಂದರ್ಭದಲ್ಲಿ ಮಾತನಾಡಿದ ಅವರು, ಮಹದಾಯಿ ವಿವಾದ ಸಂಬಂಧ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂತಾದವರು ಮೀಟಿಂಗ್ ಮಾಡ್ತಾರೆ. ಇವರು ಅವರಿಗೆ ಪತ್ರ ಬರೀತಾರೆ, ಅವರು ಇವರಿಗೆ ಪತ್ರ ಬರೀತಾರೆ. ಡ್ರಾಮಾ ಟುಟೋರಿಯಲ್ ನಡೆಸುವಂತೆ ಆಡ್ತಾರೆ ಎಂದು ಟೀಕಿಸಿದರು.

ಜನಪರ ಕಾಳಜಿಯಿಂದ ವರ್ತಿಸಬೇಕು. ಕಳೆದ 850 ದಿನಗಳಿಂದ ಉತ್ತರ ಕರ್ನಾಟಕ ಭಾಗದ ಜನ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋವಾ ಮುಖ್ಯಮಂತ್ರಿಗಳು ಜವಾಬ್ದಾರಿ ಸ್ಥಾನದಲ್ಲಿರುವವರು ಸಾಂವಿಧಾನಿಕವಾಗಿ ನಡೆದುಕೊಳ್ಳಬೇಕು. ಆದರೆ ಜನರ ದಾರಿತಪ್ಪಿಸುವ ಕೆಲಸ ಮಾಡಬಾರದು. ಇವರು ಮಾಡುವ ರಾಜಕೀಯ ಗಿಮಿಕ್ ಬಹಳ ಕಾಲ ನಡೆಯುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Facebook Comments

Sri Raghav

Admin