ವಾಜಪೇಯಿ ಕಪ್ : ಕರ್ನಾಟಕ ಯೂತ್ಸ್ ಗೆ ಭರ್ಜರಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

vajpeyi--01

ಬೆಂಗಳೂರು, ಡಿ.24- ವಾಜಪೇಯಿ ಕಪ್ ವಾಲಿಬಾಲï ಪಂದ್ಯಾವಳಿಯಲ್ಲಿ ನಿನ್ನೆ ನಡೆದ ಮಹಿಳಾ ವಿಭಾಗ ಪಂದ್ಯದಲ್ಲಿ ಸಾಯಿಯೂತ್ ಎದುರು ತಲಸ್ಹೇರಿ ಗೆಲುವು ಸಾಧಿಸಿದರೆ, ಬೆಂಗಳೂರಿನ ಪೋಸ್ಟಲ್ ತಂಡದೆದುರು ಕರ್ನಾಟಕ ಯುತ್ಸ್ ತಂಡ ಗೆಲುವು ಸಾಧಿಸಿದೆ. ಪುರುಷರ ವಿಭಾಗದಲ್ಲಿ ಸಾಯಿಯೂತ್ ಎದುರು ಕಾಲಿಕ್ಕತ್ ವಿವಿ ಗೆಲುವು ಸಾಧಿಸಿದೆ. ಸ್ವಾಮಿ ವಿವೇಕಾನಂದ ಕ್ರೀಡಾಂ ಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‍ಎ ಟಿ ತಲಸ್ಹೇರಿ ಮಹಿಳಾ ತಂಡದ ನಾಯಕಿ ಅಂಜಲಿ ಬಾಬುರವರ ರೋಚಕ ಆಟದಿಂದಾಗಿ ಸಾಯಿ ಯೂತ್ ತಂಡದೆದುರು 25-17, 25-16 ಅಂಕಗಳೊಂದಿಗೆ ರೋಚಕ ಗೆಲುವು ಸಾಧಿಸಿತು.

ಇನ್ನೊಂದು ಪ್ರತ್ಯೇಕ ಪಂದ್ಯದಲ್ಲಿ ಕರ್ನಾಟಕ ಯುತ್ ಮಹಿಳಾ ತಂಡದ ಆಲ್‍ರೌಂಡರ್ ಆಟ ಗಾರ್ತಿ ನಿತ್ಯಾ ಕೆ.ಜಿ. ಅವರ ಅದ್ಭುತ ಪ್ರದರ್ಶನದಿಂದ ಬೆಂಗಳೂರು ಪೋಸ್ಟಲ್ ತಂಡದೆದುರು 25- 16,16-25, 15-05   ಅಂಕ ಗಳೊಂದಿಗೆ ಗೆಲುವು ಸಾಧಿಸಿದೆ. ಕಾಲಿಕ್ಕತ್ ವಿಶ್ವವಿದ್ಯಾಲಯ ತಂಡವು ನಾಯಕ ರಾಹುಲ್‍ರ ರೋಚಕ ಆಟದಿಂದಾಗಿ ಸಾಯಿ ಯೂತ್ ತಂಡವನ್ನು 25-18, 25-21, 25-18 ಅಂತರದಿಂದ ಸೋಲಿಸಿತು.   ನಿನ್ನೆ ನಡೆದ ಪುರುಷರ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸ್ಟೆಕರ್ಸ್‍ನ ಸೆಲ್ವ ಪ್ರಭುರವರ ವಿರೋಚಿತ ಪ್ರದರ್ಶನದಿಂದಾಗಿ ಕೊಚ್ಚಿನ್ ಕಸ್ಟಮ್ ತಂಡದ ವಿರುದ್ಧ 3-0ಯಿಂದ ಗೆಲುವು ಸಾಧಿಸಿತು.

Facebook Comments

Sri Raghav

Admin