ಶಾಪಿಂಗ್ ಮಾಲ್‍ಗೆ ಬೆಂಕಿ ಬಿದ್ದು 37 ಮಂದಿ ಸುಟ್ಟು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Mall--02

ಮನೀಲಾ, ಡಿ.24- ಶಾಪಿಂಗ್ ಮಾಲ್‍ಗೆ ಬೆಂಕಿ ಬಿದ್ದು 37 ಮಂದಿ ಸುಟ್ಟು ಭಸ್ಮವಾಗಿರುವ ಘಟನೆ ಪಿಲಿಫೈನ್‍ನಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಟ್ಟಡದ ಒಂದು ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಮಾಲನ್ನೇ ಆವರಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡ ಧಗಧಗಿಸಿ 37ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾ ಮಕ ದಳದ ಸಿಬ್ಬಂದಿ ಬೆಳಗಿನ ಜಾವ 3 ಗಂಟೆವರೆಗೂ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿದ್ದು, ಅವರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ. ಇಡೀ ಕಟ್ಟಡವನ್ನು ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟ ಹೊಗೆ ಆವರಿಸಿದ್ದರಿಂದ ಕಟ್ಟಡದಲ್ಲಿದ್ದವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಪಿಲಿಪೈನ್ ಅಧ್ಯಕ್ಷ ಬೋಡ್ರಿಗೋ ಡ್ಯುಟಾರ್ಟ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Facebook Comments

Sri Raghav

Admin