ಚಿತ್ರದುರ್ಗ : ಚಾಕೊಲೆಟ್ ಆಸೆ ತೋರಿಸಿ ಬಾಲಕಿಯನ್ನು ರೇಪ್ ಮಾಡಿದ ಕಾಮುಕ

ಈ ಸುದ್ದಿಯನ್ನು ಶೇರ್ ಮಾಡಿ

rape

ಚಿತ್ರದುರ್ಗ, ಡಿ.25- ಒಂಭತ್ತು ವರ್ಷದ ಬಾಲಕಿಯನ್ನು ಚಾಕೊಲೆಟ್ ಕೊಡಿಸುವ ನೆಪದಲ್ಲಿ ಕರೆದೊಯ್ದ ಕಾಮುಕ ಆಕೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನೆಂದು ಬಾಲಕಿ ತಿಳಿಸಿದ್ದಾಳೆ. ಸಂತ್ರಸ್ತ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕನ ಬೇಟೆಗೆ ಮುಂದಾಗಿದ್ದಾರೆ.

Facebook Comments

Sri Raghav

Admin