ಅಣ್ವಸ್ತ್ರ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಉಪಗ್ರಹ ಉಡಾವಣೆಗೆ ಮುಂದಾದ ಉತ್ತರ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

North-Korea--02

ಸಿಯೋಲ್, ಡಿ.26-ಪದೇ ಪದೇ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಾ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಹಠಮಾರಿ ಉತ್ತರ ಕೊರಿಯಾ ಈಗ ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದು, ಮಾರಕಾಸ್ತ್ರಗಳ ಪರೀಕ್ಷೆಗೆ ಈ ಬಾಹ್ಯಾಕಾಶ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ನೆರವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ತನ್ನ ಅಣ್ವಸ್ತ್ರಗಳು ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದ ಕಾರಣಕ್ಕಾಗಿ ವಿಶ್ವಸಂಸ್ಥೆಯಿಂದ ಬಹು ದಿಗ್ಬಂಧನಗಳಿಗೆ ಒಳಗಾಗಿರುವ ಉತ್ತರ ಕೊರಿಯಾ ಮೇಲೆ ಉಪಗ್ರಹಗಳ ಉಡ್ಡಯನ ಸೇರಿದಂತೆ ಖಂಡಾಂತರ ಕ್ಷಿಪಣಿ ತಂತ್ರಜ್ಞಾನ ಬಳಸಿ ಯಾವುದೇ ಪ್ರಯೋಗ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಯಾವುದೇ ಕ್ರಮಗಳಿಗೂ ಜಗ್ಗದ ಉತ್ತರ ಕೊರಿಯಾ ಇದೀಗ ಉಪಗ್ರಹ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ಹೊಸ ಉಪಗ್ರಹ ಯೋಜನೆಯನ್ನು ಪೂರ್ಣಗೊಳಿಸಿದ್ದು, ಇದಕ್ಕೆ ಕ್ವಾಂಗ್‍ಮೈಯೊಂಗ್‍ಸಾಂಗ್-5 ಎಂದು ಹೆಸರಿಟ್ಟಿದೆ ಎಂದು ದಕ್ಷಿಣ ಕೊರಿಯಾ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Facebook Comments

Sri Raghav

Admin