ದುರಂತ ತಪ್ಪಿಸಲು ಮಾರುಕಟ್ಟೆಗೆ ಬಂತು ‘ಗೋ ಗ್ಯಾಸ್ ಎ ಲೈಟ್’

ಈ ಸುದ್ದಿಯನ್ನು ಶೇರ್ ಮಾಡಿ

gas-11

ಬೆಂಗಳೂರು,ಡಿ.26-ಗ್ಯಾಸ್ ಸಿಲಿಂಡರ್ ನಿಂದಾಗುವ ಅನಾಹುತ ತಪ್ಪಿಸಲು ಭಾರತದಲ್ಲೇ ಪ್ರಥಮ ಬಾರಿಗೆ ಮಹತ್ವದ ನಾಗಪುರದ ಕಾನ್ಫಡೆಂನ್ಸ್ ಪೆಟ್ರೋಲಿಯಂ ಇಂಡಿಯಾ ಲಿಮಿಟೆಡ್ ಗೋ ಗ್ಯಾಸ್ ಎ ಲೈಟ್ ಬಿಡುಗಡೆ ಮಾಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಲಿಮಿಟೆಡ್‍ನ ಮುಖ್ಯಸ್ಥ ರಾಜೇಶ್ ನಾಯರ್ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೋಹದ ಅನಿಲ ಸಿಲಿಂಡರ್‍ಗಳು ಅತ್ಯಂತ ಅಪಾಯಕಾರಿಯಾಗಿದ್ದು , ವಿದ್ಯುತ್ ಶಾರ್ಟ್ ಸಕ್ರ್ಯೂಟ್, ಕಂಪನ, ಸಿಲಿಂಡರ್ ಮೇಲೆ ಸೀಳು ಉಂಟಾಗಿ ಹಾನಿಯಾಗುತ್ತದೆ. ಹಾನಿಗೊಳಗಾದ ಸಿಲಿಂಡರ್‍ಗಳು ಸಿಡಿದು ಅವುಗಳಿಂದ ಅಪಾಯ ಸಂಭವಿಸುತ್ತದೆ.

ಈ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಗೋ ಗ್ಯಾಸ್ ಬಿಡುಗಡೆ ಮಾಡುತ್ತಿದ್ದು , ಈ ಗ್ಯಾಸನ್ನು ಸಂಯೋಜಿತ ಅನಿಲ ಸಿಲಿಂಡರ್‍ಗಳು ಜಾಗತಿಕ ಮಟ್ಟದ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿದ್ದು , ಈಗ ಬೆಂಗಳೂರು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದರು. ದೇಶದ ಜನಸಂಖ್ಯೆ 125 ಕೋಟಿ ಇದ್ದು 75ಕೋಟಿ ಮಂದಿ ಎಲ್‍ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಆದರೆ ಅವರಿಗೆ ಸಿಲಿಂಡರ್ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲ. ಅಲ್ಲದೆ ಅವರು ಎಷ್ಟು ಅನಿಲ ಪಡೆದಿರಬೇಕು ಎಂಬುದರ ಬಗ್ಗೆಯೂ ತಿಳಿದಿರುವುದಿಲ್ಲ. ಈ ಗೋ ಗ್ಯಾಸ್ ಸಿಲಿಂಡರ್‍ಗಳು ಕಬ್ಬಿಣದ ಸಿಲಿಂಡರ್‍ಗಿಂತ ಭಿನ್ನವಾಗಿದ್ದು, 2, 5, 10, 22 ಕೆಜಿ ತೂಕದ ಸಿಲಿಂಡರ್‍ಗಳು ಲಭ್ಯವಾಗುತ್ತದೆ. ಅಲ್ಲದೆ ಈ ಗ್ಯಾಸ್‍ಗಳು ಸ್ಪೋಟವಾಗದಂತಹ ಸುರಕ್ಷಿತ ಕವಚಗಳನ್ನು ಹೊಂದಿದ್ದು , ಭಾರತ ಸರ್ಕಾರದ ಸ್ಪೋಟಕ ಇಲಾಖೆಯಿಂದ ಲೈಸೆನ್ಸ್ ಕೂಡ ಪಡೆದಿದ್ದು , ಇದನ್ನು ಮಕ್ಕಳು ಸಹ ಹಚ್ಚಬಹುದಾಗಿದೆ. ಏಷ್ಯಾದಲ್ಲಿ ಅತಿಹೆಚ್ಚು ಸಿಲಿಂಡರ್ ತಯಾರಿಸುವ ಹೆಗ್ಗಳಿಕೆ ಕಾನ್ಫಿಡೆಂಟ್ ಗ್ರೂಪ್ ಆಗಿದೆ. ಹೈಡ್ರಾಲಿಕ್ ಎಕ್ಸ್‍ಪ್ಯಾನ್ಷನ್ ಟೆಸ್ಟ್ , ಸಿಲಿಂಡರ್ ಬಸ್ರ್ಟ್ ಟೆಸ್ಟ್ , ಅಂಬಿಯೇಟ್ ಸೈಕಲ್, ವ್ಯಾಕ್ಯೂಮ್ ಎನವರ್ನಮೆಂಟ್ ಸೈಕಲ್, ಹೈ ಟೆಂಪರೇಚರ್ ಕ್ರೀಪ್ ಟೆಸ್ಟ್‍ಗಳನ್ನು ಮಾಡಲಾಗಿದೆ.

ಮುಂದಿನ ಮೂರು ತಿಂಗಳಲ್ಲಿ ಭಾರತದ ಎಲ್ಲ ನಗರಗಳಲ್ಲೂ ಈ ಗ್ಯಾಸ್‍ಗಳನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಗ್ರೂಪ್‍ನ ಸಂತೋಷ್ ವಾಮಲೆ ಹೇಳಿದರು. ಡಿಜಿಎಂ( ವ್ಯವಹಾರಿಕ ಅಭಿವೃದ್ಧಿ) ವೆಂಕಟ್ ರಾಮನ್ ಮಾತನಾಡಿ, 30 ಕೆಜಿ ಸಿಲಿಂಡರ್ ಎತ್ತುವುದು ಯಾರಿಂದಲೂ ಆಗುವುದಿಲ್ಲ. ಅದು ಕಷ್ಟ. 23 ಕೆಜಿಗಿಂತಲೂ ಹೆಚ್ಚಿನ ತೂಕವನ್ನು ಎತ್ತುವುದರಿಂದ ಬೆನ್ನು ಮೂಳೆ ಹಾನಿ ಉಂಟಾಗುತ್ತದೆ. ಆದುದರಿಂದ ಗೋ ಗ್ಯಾಸ್ ಸಿಲಿಂಡರ್, 2, 5, 10, 22 ಕೆಜಿಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Facebook Comments

Sri Raghav

Admin