‘ಪಾಪಿ’ಸ್ತಾನದ ವಿರುದ್ಧ ಮಿನಿ ಸರ್ಜಿಕಲ್ ಸ್ಟ್ರೈಕ್, ಗಡಿಯೊಳಗೆ ನುಗ್ಗಿ ಸೇಡು ತೀರಿಸಿಕೊಂಡ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

India--02

ನವದೆಹಲಿ, ಡಿ.26- ಭಾರತದ ಮಿಂಚಿನ ಕಾರ್ಯಾಚರಣೆಗೆ ಸಾಕ್ಷಿಯಾದ ಕಳೆದ ಸೆಪ್ಟೆಂಬರ್‍ನಲ್ಲಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರನ್ನು ಹತ್ಯೆಗೈದಿದ್ದ ಭಾರತೀಯ ಸೇನೆ ಇದೀಗ ಮತ್ತೊಮ್ಮೆ ಸರ್ಜಿಕಲ್ ಮಾದರಿ ಕಾರ್ಯಾಚರಣೆ ನಡೆಸಿ ಪಾಕ್‍ಗೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ಪಾಕ್ ನೆಲಕ್ಕೆ ನುಗ್ಗಿ ಪಾಕಿಸ್ತಾನಿ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಉಲ್ಲಂಘನೆಕೋರರನ್ನು ಭಾರತದ ಕಮಾಂಡೋಗಳು ಸದೆ ಬಡಿದು ಯಶಸ್ವಿಯಾಗಿ ಹಿಂದಿರುಗಿದ್ದಾರೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ಹಾಗೂ ಶೆಲ್ ದಾಳಿ ನಡೆಸಿದ್ದರು.

ಪಾಕ್ ರೇಂಜರ್‍ಗಳ ಗುಂಡಿನ ದಾಳಿಗೆ ಭಾರತದ ಯೋಧ ಪರ್ಗತ್ ಸಿಂಗ್ ಹುತಾತ್ಮರಾಗಿದ್ದರು. ಈ ಅಪ್ರಚೋದಿತ ದಾಳಿ ಭಾರತದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂಬ ಒತ್ತಡವೂ ಕೇಳಿಬರುತ್ತಿದ್ದಂತೆ ಅತ್ತ ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಮೂವರು ಪಾಕಿಸ್ತಾನಿ ಸೈನಿಕರನ್ನು ಕೊಂದು ಯಶಸ್ವಿ ಕಾರ್ಯಾಚರಣೆಯೊಂದಿಗೆ ಹಿಂದಿರುಗಿದೆ.
ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವಂತೆ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ ರಾಖಿಕ್ರಿ, ರಾವಲ್ ಕೋಟ್ ವಲಯಗಳಲ್ಲಿ ಪಾಕಿಸ್ತಾನಿ ಸೇನಾ ಶಿಬಿರಗಳ ಮೇಲೆ ಭಾರತೀಯ ಪಡೆಗಳು ದಾಳಿ ಮಾಡಿದ್ದು, ಈ ವೇಳೆ ಮೂವರು ಪಾಕಿಸ್ತಾನಿ ಯೋಧರನ್ನು ಸದೆ ಬಡಿದಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಯ ಈ ಕಾರ್ಯಾಚರಣೆಯನ್ನು 2016ರ ಸೆಪ್ಟೆಂಬರ್‍ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯನ್ನು ನೆನಪಿಸುತ್ತದೆ. ಅಂದೂ ಕೂಡ ಉರಿ ವಲಯದ ಮೇಲೆ ಉಗ್ರರು ದಾಳಿ ಮಾಡಿ ಹಲವು ಭಾರತೀಯ ಯೋಧರನ್ನು ಕೊಂದು ಹಾಕಿದ್ದರು. ಇದರ ಬೆನ್ನಲ್ಲೇ ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಬೀಡು ಬಿಟ್ಟಿದ್ದ ಹತ್ತಾರು ಉಗ್ರ ಕ್ಯಾಂಪ್‍ಗಳನ್ನು ಧ್ವಂಸ ಮಾಡಿದ್ದಲ್ಲದೆ 40ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿತ್ತು. ಇದೀಗ ಅಂತಹದೇ ಮತ್ತೊಂದು ಕಾರ್ಯಾಚರಣೆಯನ್ನು ಸೇನೆ ನಡೆಸಿದ್ದು, ಈ ಬಾರಿ ನೇರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಿ ಸೈನಿಕರನ್ನೇ ಮಟ್ಟ ಹಾಕಿ ಹಿಂದಿರುಗಿದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin