ಮಹದಾಯಿ ಹೋರಾಟದ ಬೆಂಬಲಕ್ಕೆ ಬಂದ ಚಿತ್ರರಂಗ

ಈ ಸುದ್ದಿಯನ್ನು ಶೇರ್ ಮಾಡಿ

Mahadayi-Film--01

ಬೆಂಗಳೂರು, ಡಿ.26-ಮಹದಾಯಿ ಹೋರಾಟ ತೀವ್ರಗೊಂಡಿದ್ದು, ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಪುತ್ರ ಅನೂಪ್ ಗೋವಿಂದ್ ಸೇರಿದಂತೆ ಅನೇಕ ಮುಖಂಡರು ಬೆಂಬಲ ನೀಡಿದರು. ಬಿಜೆಪಿ ಕಚೇರಿ ಎದುರು ಮಹದಾಯಿ ನೀರಿಗಾಗಿ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಚಲನಚಿತ್ರ ರಂಗ ಬೆಂಬಲ ನೀಡಿದೆ.

ಇಂದು ಮಧ್ಯಾಹ್ನ ಚಲನಚಿತ್ರ ಕ್ಷೇತ್ರದ ಪ್ರಮುಖರು ಪ್ರತಿಭಟನಾ ಸ್ಥಳಕ್ಕೆ ತೆರಳಲಿದ್ದಾರೆ. ಸಾ.ರಾ.ಗೋವಿಂದ್ ಮಾತನಾಡಿ, ರೈತರ ಹೋರಾಟಕ್ಕೆ ಕನ್ನಡ ಚಲನ ಚಿತ್ರರಂಗ ಸದಾ ಬೆಂಬಲ ನೀಡುತ್ತದೆ. ನಾನು ಮೂರು ದಿನಗಳಿಂದ ಇರಲಿಲ್ಲ. ಹಾಗಾಗಿ ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ನಡೆದ ಪ್ರತಿಭಟನೆಗೆ ಹೋಗಿ ನಾವು ಬೆಂಬಲ ನೀಡಿದ್ದೇವೆ. ಈಗ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ಕೊಡದೇ ಇರುತ್ತೇವೆಯೇ. ಮಹದಾಯಿ ಇರಲಿ, ಕಾವೇರಿ ಹೋರಾಟ ಇರಲಿ ನೆಲ, ಜಲ, ನಾಡು, ನುಡಿ, ಸಂಸ್ಕøತಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆಂದು ತಿಳಿಸಿದರು. ಇದೇ 28ರಂದು ಮಹದಾಯಿಗಾಗಿ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರಾಳ ದಿನಾಚರಣೆ ಆಚರಿಸುತ್ತಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

Facebook Comments

Sri Raghav

Admin