2.3 ಲಕ್ಷ ಜನರನ್ನು ನುಂಗಿ ಹಾಕಿದ ವಿನಾಶಕಾರಿ ಸುನಾಮಿ ದುರಂತಕ್ಕೆ ಇಂದಿಗೆ 13ನೇ ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

Tsunami--02

ಡಿಸೆಂಬರ್ 26, 2004 ಏಷ್ಯಾದ ಅನೇಕ ರಾಷ್ಟ್ರಗಳಿಗೆ ಅತ್ಯಂತ ಕರಾಳ ದಿನ. ಇಂಡೋನೆಷ್ಯಾದ ಸುಮಾತ್ರ ದ್ವೀಪದ ಸಾಗರಗರ್ಭದಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು ನಂತರ ಅಪ್ಪಳಿಸಿದ ವಿನಾಶಕಾರಿ ಸುನಾಮಿಗೆ 2 ಲಕ್ಷ 30 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಹಿಂದು ಮಹಾಸಾಗರದಲ್ಲಿ ವಿನಾಶಕಾರಿ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿದ ದುರಂತ ದಿನ. ಶ್ರೀಲಂಕಾ, ಭಾರತ, ಇಂಡೋನೆಷ್ಯಾ, ಥೈಲೆಂಡ್, ಮಲೇಷ್ಯಾ, ಮಾಲ್ಡೀವ್ಸ್ ಮತ್ತು ಭಾರತ ಸೇರಿದಂತೆ 14 ದೇಶಗಳ ಕರಾವಳಿ ಮೇಲೆ ಬಂದೆರಗಿದ ಘೋರ ಪ್ರಕೃತಿ ವಿಕೋಪದ ಆರ್ಭಟದಲ್ಲಿ ಅಪಾರ ಸಾವು-ನೋವು ಸಂಭವಿಸಿತು. ಕರಾವಳಿ ತೀರಗಳ ಮೇಲೆ 100 ಅಡಿಗಳಿಗೂ ಎತ್ತರದ ಅಲೆಗಳು ಅಪ್ಪಳಿಸಿ ಅಲ್ಲೋಲ-ಕಲ್ಲೋಲವಾಯಿತು. ಇದು ಇತಿಹಾಸ ಅತ್ಯಂತ ಘೋರ ದುರಂತ. ಭೂಗರ್ಭ ಇಲಾಖೆಯಲ್ಲಿ ದಾಖಲಾದ ಮೂರನೇ ಅತ್ಯಂತ ಪ್ರಬಲ ಭೂಕಂಪವೂ ಇದಾಗಿತ್ತು.

T 5

ಅಧಿಕೃತ ಮೂಲಗಳ ಪ್ರಕಾರ ಸುನಾಮಿ 2 ಲಕ್ಷ 30 ಸಾವಿರ ಜನರನ್ನು ಆಪೋಶನ ತೆಗೆದುಕೊಂಡಿತು. ಆದರೆ, ಈ ದುರಂತದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿ. ಲಕ್ಷಾಂತರ ಜನರು ಸಂತ್ರಸ್ತರಾದರು. ಇಂಡೋನೆಷ್ಯಾದ ಸುಮಾತ್ರ ದ್ವೀಪದಲ್ಲಿದ್ದ ಭೂಕಂಪದ ಕೇಂದ್ರ ಬಿಂದು ರಿಕ್ಟರ್ ಮಾಪಕದಲ್ಲಿ 9.3 ರಷ್ಟಿತ್ತು. ಸುನಾಮಿಯ ರೌದ್ರಾವತಾರದಿಂದ ಸಾಗರ ತೀರ ಪ್ರದೇಶಗಳು ಅಕ್ಷರಶಃ ಜಲಪ್ರಳಯ ಸದೃಶವಾದವು. ಅನೇಕರು ನಾಪತ್ತೆಯಾದರು. ಈ ದೇಶಗಳಿಗೆ ನೆರವು ನೀಡಲು ವಿಶ್ವದಾದ್ಯಂತ 14 ಶತಕೋಟಿ ಡಾಲರ್‍ಗಳ ಮಾನವೀಯ ನೆರವು ನೀಡಲಾಯಿತು.

T 4

 

 

T 03

T 02 T 1

Facebook Comments

Sri Raghav

Admin