ನಿರ್ಮಾಪಕ ಗೋವರ್ಧನ ಮೂರ್ತಿಯವರನ್ನು ಕೈಹಿಡಿದ ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಮಂಜುಳಾ

ಈ ಸುದ್ದಿಯನ್ನು ಶೇರ್ ಮಾಡಿ

Gov

ಬೆಂಗಳೂರು. ಡಿ.28 : ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರ ವಿವಾಹ ಸರಳವಾಗಿ ನಡೆದಿದೆ. ಕಾಂಗ್ರೆಸ್ ವಲಯದಲ್ಲಿ ಯುವ ನಾಯಕಿಯೆಂದೇ ಗುರುತಿಸಿಕೊಂಡಿರುವ ಮಂಜುಳಾ ಅವರು ವೈವಾಹಕ ಜೀವನಕ್ಕೆ ಕಾಲಿರಿಸಿರುವುದು ಸಾಕಷ್ಟು ದೊಡ್ಡ ಸುದ್ದಿಯಾಗಿದೆ. ಸಾರಿಗೆ ಸಚಿವ ಹೆಚ್. ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾದ ಮಂಜುಳಾ ಅವರ ಸರಳ ವಿವಾಹ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದೇವಾಲಯವೊಂದರಲ್ಲಿ ವಿವಾಹ ನಡೆದಿದ್ದು, ಇಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Manjula--01

Facebook Comments

Sri Raghav

Admin