ತೈಲ ಆಮದು ಶುಲ್ಕದಲ್ಲಿ 100 ಶತಕೋಟಿ ಡಾಲರ್‍ನಷ್ಟು ಇಳಿಸಲು ಕೇಂದ್ರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Petrol

ನವದೆಹಲಿ, ಡಿ.29-ಅಡುಗೆ ಅನಿಲ ಮತ್ತು ಸಾರಿಗೆ ಇಂಧನವಾಗಿ ಮೆಥನಾಲ್‍ನ ವ್ಯಾಪಕ ಬಳಕೆ ಮೂಲಕ 2030ರ ವೇಳೆಗೆ ವಾರ್ಷಿಕ ತೈಲ ಆಮದು ಶುಲ್ಕದಲ್ಲಿ 100 ಶತಕೋಟಿ ಡಾಲರ್‍ಗಳಷ್ಟು (ಸುಮಾರು 6,50,000 ಕೋಟಿ ರೂ.ಗಳು) ಕಡಿತ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.  ಲೋಕಸಭೆಯ ಶೂನ್ಯವೇಳೆಯಲ್ಲಿ ಈ ಮಾಹಿತಿ ನೀಡಿದ ಸಚಿವರು, ಮೆಥನಾಲ್ ಬಳಕೆಯಿಂದಾಗಿ ಭಾರತದ ತೈಲ ಆಮದು ಶುಲ್ಕದಲ್ಲಿ ಶೇ.30ರಷ್ಟು ಇಳಿಕೆಯಾಗಲಿದೆ. ಇದಕ್ಕಾಗಿ ಸರ್ಕಾರವು ಯೋಜನೆಯೊಂದನ್ನು ಅನುಷ್ಠಾನಗೊಳಿಸಲಿದೆ ಪೆಟ್ರೋಲ್‍ನೊಂದಿಗೆ ಶೇ.15ರಷ್ಟು ಮೆಥನಾಲ್‍ನಿಂದ ಇಂಧನ ವೆಚ್ಚ ಕಡಿಮೆಯಾಗಲಿದೆ ಎಂದರು.

ಕಚ್ಚಾ ತೈಲವನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2030ರ ವೇಳೆಗೆ ವಾರ್ಷಿಕ ಶುಲ್ಕದಲ್ಲಿ 100 ಶತಕೋಟಿ ಡಾಲರ್‍ಗಳಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ನೀತಿ ಆಯೋಗವು ಮೆಥನಾಲ್ ಆರ್ಥಿಕತೆ ಯೋಜನೆಗಾಗಿ ಅಂತಿಮ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ. ಎಂದು ಅವರು ತಿಳಿಸಿದರು. ಭಾರತವು ವರ್ಷಕ್ಕೆ 2,900 ಕೋಟಿ ಲೀಟರ್‍ಗಳಷ್ಟು ಪೆಟ್ರೋಲ್ ಮತ್ತು 9,000 ಕೋಟಿ ಲೀಟರ್‍ಗಳಷ್ಟು ಡೀಸೆಲ್‍ನಲ್ಲಿ ಆಮದು ಮಾಡಿಕೊಳ್ಳುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Facebook Comments

Sri Raghav

Admin