ನೋ ಬೆಗ್ಗಿಂಗ್ ಪ್ಲೀಸ್ ! : ಕೇಂದ್ರ ಸಚಿವರಿಗೆ ರಾಜ್ಯಸಭಾ ಸಭಾಪತಿ ನಾಯ್ಡು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Venkaiah-Naidu--01

ನವದೆಹಲಿ, ಡಿ.20-ನೋ ಬೆಗ್ಗಿಂಗ್ ಪ್ಲೀಸ್ ! (ದಯವಿಟ್ಟು ಬೇಡಬೇಡಿ!)-ಉಪ ರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು ಕೇಂದ್ರ ಸಚಿವರಿಗೆ ನೀಡಿದ ಸೂಚನೆ ಇದು. ಸದನದಲ್ಲಿ ಅಧಿಕೃತ ಕಾಗದ ಪತ್ರಗಳನ್ನು ಮಂಡಿಸುವಾಗ ಈ ಪದಗಳನ್ನು ಬಳಸುವುದು ವಾಡಿಕೆ. ಈ ಪದಗಳನ್ನು ಉಪಯೋಗಿಸದಂತೆ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದೇ ತಿಳಿಸಿ ಹೊಸ ಸಂಪ್ರದಾಯಕ್ಕೆ ಕಾರಣವಾಗಿದ್ದ ನಾಯ್ಡು ದಯವಿಟ್ಟು ಬೇಡಬೇಡಿ ಎಂಬ ಪದಗಳನ್ನು ಬಳಸದಂತೆ ಮತ್ತೊಮ್ಮೆ ಸೂಚಿಸಿದರು.

ಇಂದಿನ ಆದೇಶ ಹಾಳೆಯ ಪಟ್ಟಿಯಲ್ಲಿ ನನ್ನ ಹೆಸರಿನ ಮುಂದೆ ಇರುವ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕಾಗದಪತ್ರಗಳನ್ನು ಮಂಡಿಸಲು ಬೇಡುತ್ತೇನೆ ಎಂದು ಸಚಿವರ ಹೇಳುವುದು ವಾಡಿಕೆ. ಆದರೆ ಇದು ಸ್ವತಂತ್ರ ಭಾರತ. ಹೀಗಾಗಿ ಯಾರೂ ಬೇಡುವ ಅಗತ್ಯವಿಲ್ಲ ಎಂದು ಹೇಳಿದ ನಾಯ್ಡು, ಈ ಮೇಲಿನ ಪದವನ್ನು ಇಂದಿನ ಆದೇಶ ಹಾಳೆಯ ಪಟ್ಟಿಯಲ್ಲಿ ನನ್ನ ಹೆಸರಿನ ಮುಂದೆ ಇರುವ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕಾಗದಪತ್ರಗಳನ್ನು ಮಂಡಿಸಲು ಬಯಸುತ್ತೇನೆ ಎನ್ನುವುದು ಸೂಕ್ತ ಎಂಬುದಾಗಿ ಸಲಹೆ ಮಾಡಿದ್ದಾರೆ.

Facebook Comments

Sri Raghav

Admin