ಸತತ ಐದು ದಿನಗಳ ಕಾಲ ಯೋಗ ಮಾಡಿ ಚೆನ್ನೈನ ಕವಿತಾ ಗಿನ್ನಿಸ್ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Yoga--02

ಚೆನ್ನೈ , ಡಿ.29 – ಸತತ ಐದು ದಿನಗಳ ಕಾಲ ಯೋಗ ಪ್ರದರ್ಶನ ನೀಡುವ ಮೂಲಕ ಚೆನ್ನೈನ ಕವಿತಾ ಭರಣಿಧರನ್ ಅವರು ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಮೂರುವರೆ ವರ್ಷದ ಮಗುವಿನ ತಾಯಿಯಾಗಿರುವ ಭರಣಿಧರನ್ ಅವರ ಕಳೆದ 23 ರಿಂದ ಸತತವಾಗಿ ಯೋಗ ಪ್ರದರ್ಶನ ನೀಡುತ್ತಿದ್ದು , ನಿನ್ನೆ 7 ಗಂಟೆಗೆ ಸಮಯದಲ್ಲಿ ಅತಿ ಹೆಚ್ಚು ಕಾಲ ಯೋಗ ಭಂಗಿಗಳನ್ನು ನಿರಂತರವಾಗಿ ಪ್ರದರ್ಶಿಸಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ.

ಈ ಹಿಂದೆ ನಾಸಿಕ್‍ನ ಪ್ರಧಾನ ಪಾಟೀಲ್ ಅವರು ಇದೇ ವರ್ಷದ ಜೂನ್ ತಿಂಗಳಲ್ಲಿ 16 ರಿಂದ 20ನೆ ತಾರೀಖಿನವರೆಗೂ 103 ಗಂಟೆಗಳ ಸತತ ಯೋಗಪಟ್ಟುಗಳನ್ನು ಮಾಡುವ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರಲ್ಲದೆ ದಾಖಲೆಯನ್ನು ನಿರ್ಮಿಸಿದ್ದರು. ಈಗ ಚೆನ್ನೈನ ಭರಣಿ ಅವರು ಈ ದಾಖಲೆಯನ್ನು ಮುರಿದಿದ್ದು ಡಿಸೆಂಬರ್ 30ರವರೆಗೂ ಈ ಯೋಗ ಮ್ಯಾರಥಾನ್ ಅನ್ನು ಮುಂದುವರಿಸುವ ಮೂಲಕ ಸತತ 7 ದಿನಗಳ ನಿರಂತರ ಪ್ರದರ್ಶನ ನೀಡಿದ ನೂತನ ದಾಖಲೆಯನ್ನು ತನ್ನದಾಗಿಸಿಕೊಳ್ಳುವತ್ತ ಗುರಿ ನೆಟ್ಟಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Facebook Comments

Sri Raghav

Admin