ಎಂ.ಜಿ.ರಸ್ತೆಯಲ್ಲಿ ಹೊಸವರ್ಷಾಚರಣೆ ರದ್ದುಪಡಿಸಿ : ಕಾಳಿಸ್ವಾಮಿ ಋಷಿ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Kaliswamy--01

ಬೆಂಗಳೂರು,ಡಿ.30- ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ನೀಡಿರುವ ಅನುಮತಿಯನ್ನು ಸರ್ಕಾರ ರದ್ದುಪಡಿಸಬೇಕೆಂದು ಶ್ರೀ ಸುಕ್ಷೇತ್ರ ಕಾಳಿಕಾಶ್ರಮ ಶ್ರೀ ಋಷಿ ಕುಮಾರ ಸ್ವಾಮೀಜಿ ಒತ್ತಾಯಿಸಿದ್ದಾರೆ.   ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿರಸ್ತೆಯಲ್ಲಿ ಹೊಸ ವರ್ಷ ಆಚರಣೆಗಾಗಿ ನೀಡಿರುವ ಅನುಮತಿ ರದ್ದುಪಡಿಸದಿದ್ದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗುವುದು ಎಂದು ಎಚ್ಚರಿಸಿದ್ದಾರೆ. ಕಳೆದ ಸಾಲಿನಲ್ಲಿ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಎಂ.ಜಿ.ರಸ್ತೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಇಡೀ ದೇಶವೇ ನೋಡಿದೆ. ಶಾಂತಿಗೆ ಹೆಸರಾದ ಮಹಾತ್ಮಗಾಂಧಿಯವರ ಹೆಸರಿನಲ್ಲಿರುವ ರಸ್ತೆಯನ್ನು ಹೊಸ ವರ್ಷ ಆಚರಣೆಯಲ್ಲಿ ಕುಡುಕರ ಅಡ್ಡೆಯನ್ನಾಗಿ ಮಾಡಬಾರದು. ಇದರಿಂದ ಹಿಂದು ರಾಷ್ಟ್ರದ ಮಾನ ಹಾಳಾಗಲಿದೆ ಎಂದರು.

ಕೂಡಲೇ ಸರ್ಕಾರ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷ ಆಚರಣೆಗೆ ನೀಡಿರುವುದನ್ನು ನಿರ್ಲಕ್ಷಿಸಿದ್ದಾರೆ. ಡಿ.31ರ ರಾತ್ರಿ ಕ್ರಾಂತಿಕಾರಿ ಹೋರಾಟ ನಡೆಸಲಾಗುವುದು ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರ ನೇರ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾನಂದ ಸ್ವಾಮೀಜಿ, ಶ್ರೀನಿವಾಸ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin