ಫ್ರಾನ್ಸ್ ನಲ್ಲಿ ಭಾರತದ 22 ಅಪ್ರಾಪ್ತರು ನಾಪತ್ತೆ : ಸಿಬಿಐನಿಂದ ಎಫ್‍ಐಆರ್ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

cbi

ನವದೆಹಲಿ/ಪ್ಯಾರಿಸ್, ಡಿ.30- ಫ್ರಾನ್ಸ್ ನಲ್ಲಿ ಭಾರತದ 22 ಅಪ್ರಾಪ್ತರು ನಾಪತ್ತೆಯಾಗಿರುವ ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳ(ಸಿಬಿಐ) ಎಫ್‍ಐಆರ್ ದಾಖಲಿಸಿದೆ. ರಗ್ಬಿ(ಅಮೆರಿಕನ್ ಫುಟ್ಬಾಲ್) ಕ್ರೀಡೆಗಾಗಿ ವಿಶೇಷ ತರಬೇತಿ ನೀಡುವುದಾಗಿ ಪಂಜಾಬ್, ಹರಿಯಾಣ ಮತ್ತು ದೆಹಲಿಯ 22 ಬಾಲಕರನ್ನು ಮೂವರು ಟ್ರಾವೆಲ್ ಏಜೆಂಟ್‍ಗಳು ಕಳೆದ ವರ್ಷ ಅಕ್ರಮವಾಗಿ ಫ್ರಾನ್ಸ್‍ಗೆ ಕರೆದೊಯ್ದಿದ್ದರು. ಆ ನಂತರ ಅವರೆಲ್ಲರೂ ಕಣ್ಮರೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿ ತನಿಖೆ ಚುರುಕಗೊಳಿಸಿದ್ದಾರೆ.

13 ರಿಂದ 18ರ ವಯೋಮಾನದ ಬಾಲಕರನ್ನು ಪುಸಲಾಯಿಸಿ ಫ್ರಾನ್ಸ್‍ಗೆ ಕರೆದೊಯ್ದ ಟ್ರಾವೆಲ್ ಏಜೆಂಟ್‍ಗಳಾದ ಫರಿದಾಬಾದ್‍ನ ಲಲಿತ್ ಡೇವಿಡ್ ಡೀನ್ ಹಾಗೂ ದೆಹಲಿಯ ಸಂಜೀವ್ ರಾಯ್ ಮತ್ತು ವರುಣ್ ಚೌಧರಿ ಅವರ ಮನೆಗಳು ಮತ್ತು ಕಚೇರಿಗಳಲ್ಲಿ ಸಿಬಿಐ ಶೋಧ ನಡೆಸಿ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ವಶಪಡಿಸಿಕೊಂಡಿದ್ಧಾರೆ. ಈ ಏಜೆಂಟರ್ ಬಾಲಕರನ್ನು ಖ್ಯಾತ ರಗ್ಬಿ ಆಟಗಾರರನ್ನಾಗಿ ಮಾಡುವುದಾಗಿ ಭರವಸೆ ನೀಡಿ ಪೋಷಕರಿಗೆ ಸುಮಾರು 30 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ ಅಧಿಕಾರಿಗಳು ಪ್ಯಾರಿಸ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.

Facebook Comments

Sri Raghav

Admin