ರಾಜ್‍ಕುಮಾರ್ ಹಾದಿಯಲ್ಲಿ ರಜನಿ, ರಾಜಕೀಯ ಎಂಟ್ರಿ ಡೌಟ್ ..! ಅಸಲಿ ಕಾರಣ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Rajnikat--01

ಬೆಂಗಳೂರು, ಡಿ.30- ರಾಜಕೀಯ ಪ್ರವೇಶಿಸಬೇಕೆ, ಬೇಡವೇ ಎಂಬ ತಮ್ಮ ನಿರ್ಧಾರವನ್ನು ಸೂಪರ್‍ಸ್ಟಾರ್ ರಜನಿಕಾಂತ್ ನಾಳೆ ಪ್ರಕಟಿಸಲಿದ್ದಾರೆ. ಆದರೆ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಅವರು ರಾಜಕೀಯಕ್ಕೆ ಬರುವುದೇ ಡೌಟ್ ಎಂಬ ಅನುಮಾನ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಅಭಿಮಾನಿಗಳ ಸಭೆಯಲ್ಲಿ ಕನ್ನಡ ಭಾಷೆ ಮತ್ತು ವರನಟ ಡಾ.ರಾಜ್‍ಕುಮಾರ್ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಿರುವ ಸೂಪರ್‍ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸದಿರಲು ತೀರ್ಮಾನಿಸಿರುವ ಸಂಕೇತವೆಂದೇ ಬಿಂಬಿಸಲಾಗುತ್ತಿದೆ.

ರಾಜಕೀಯಕ್ಕೆ ಸೇರಿ ಹೊಸ ಪಕ್ಷ ಸ್ಥಾಪನೆ ಕುರಿತಂತೆ ಕಳೆದ 3 ದಿನಗಳಿಂದ ಅಭಿಮಾನಿಗಳೊಂದಿಗೆ ಸಭೆ ನಡೆಸುತ್ತಿರುವ ರಜನಿಕಾಂತ್ ತಮ್ಮ ಅಂತಿಮ ತೀರ್ಮಾನವನ್ನು ನಾಳೆ ಪ್ರಕಟಿಸಲಿದ್ದಾರೆ. ಮೊನ್ನೆ ನಡೆದ ಸಭೆಯಲ್ಲಿ ಕನ್ನಡದ ವರನಟ ಡಾ.ರಾಜ್‍ಕುಮಾರ್‍ರ ಪಾದಸ್ಪರ್ಶ ಮಾಡಿದ್ದೇ ನನ್ನ ಪುಣ್ಯ ಎಂದು ಗುಣಗಾನ ಮಾಡಿದ್ದ ರಜನಿ ಅವರು ನಾನು ಎಂದೆಂದಿಗೂ ಕನ್ನಡಿಗ ಎಂದು ಘೋಷಿಸಿಕೊಂಡಿದ್ದಾರೆ.

ನಾನು ಹುಟ್ಟಿ , ಬೆಳೆದದ್ದು ಕರ್ನಾಟಕದಲ್ಲಿ . ನನ್ನ ಮಾತೃಭಾಷೆ ಮರಾಠಿಯಾದರೂ ನಾನು ಮತ್ತು ನನ್ನ ಮನೆಯವರು ಕನ್ನಡದಲ್ಲೇ ವ್ಯವಹರಿಸುವುದು, ನಟನೆಗಾಗಿ ತಮಿಳುನಾಡಿಗೆ ಬಂದು ನೆಲೆಸಿದ ನನಗೆ ನಿರ್ದೇಶಕ ಬಾಲಚಂದರ್ ಅವರು ತಮಿಳು ಕಲಿಯುವಂತೆ ಪ್ರೋತ್ಸಾಹಿಸಿದರು.
ಅವರ ಪ್ರೋತ್ಸಾಹದಂತೆ ನಾನು ತಮಿಳು ಕಲಿತೆ. ಆದರೆ ನನಗೆ ಇಂದಿಗೂ ತಮಿಳು ಭಾಷೆಯನ್ನು ಕನ್ನಡದಷ್ಟು ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ರಾಜಕೀಯ ಪಂಡಿತರ ಪ್ರಕಾರ ತಮಿಳುನಾಡಿನ ಜನ ತಮ್ಮ ನೆಲ, ಜಲ, ಭಾಷೆಗಾಗಿ ಪ್ರಾಣಬಿಡಲು ಸಿದ್ಧರು. ತಮ್ಮ ಭಾಷೆಯ ಮೇಲೆ ಅಭಿಮಾನ ಹೊಂದಿದವರನ್ನು ಮಾತ್ರ ರಾಜಕೀಯವಾಗಿ ಬೆಳೆಸುತ್ತಾರೆ. ಅದಕ್ಕೆ ಎಂ.ಜಿ.ಆರ್., ಕರುಣಾನಿಧಿ, ಜಯಲಲಿತಾ ಮತ್ತಿತರರು ಉದಾಹರಣೆಯಾಗಿದ್ದಾರೆ.
ಇವರ ಹಾದಿಯಲ್ಲೇ ರಜನಿಕಾಂತ್ ರಾಜಕೀಯ ಸೇರಲು ಇಚ್ಛಿಸಿದ್ದರೆ ಅಭಿಮಾನಿಗಳ ಸಭೆಯಲ್ಲಿ ಕನ್ನಡಾಭಿಮಾನ ತೋರುತ್ತಿರಲಿಲ್ಲ . ಕಳೆದ 3-4 ದಿನಗಳ ಅವರ ಭಾಷಣ ಕೇಳಿದರೆ ಅವರು ಖಂಡಿತ ರಾಜಕೀಯಕ್ಕೆ ಬರುವುದಿಲ್ಲ ಎನ್ನುವುದರ ಧ್ಯೋತಕವಾಗಿದೆ ಎನ್ನುತ್ತಾರೆ ರಜನಿ ಆಪ್ತರು.

Facebook Comments

Sri Raghav

Admin