ಕೀನ್ಯಾದಲ್ಲಿ ಬಸ್ ಗೆ ಟ್ರಕ್ ಡಿಕ್ಕಿಯಾಗಿ 30 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Kenya--02

ನೈರೋಬಿ, ಡಿ.31-ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 30 ಮಂದಿ ಮೃತಪಟ್ಟು, ಇತರ 16 ಜನ ಗಾಯಗೊಂಡಿರುವ ಭೀಕರ ಘಟನೆ ಕೀನ್ಯಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ನಕುರು-ಎಲ್ಡೊರೆಟ್ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತ ವಲಯವಾದ ಈ ಪ್ರದೇಶದಲ್ಲಿ ಈ ತಿಂಗಳೊಂದರಲ್ಲೇ ಮೃತರ ಸಂಖ್ಯೆ 100ಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಭೀಕರ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರು ಮತ್ತು ಮೂರು ವರ್ಷದ ಮಗುವೊಂದು ಸೇರಿದಂತೆ 30 ಮಂದಿ ಮೃತಪಟ್ಟಿದ್ದಾರೆ. 16 ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಿಫ್ಟ್ ವ್ಯಾಲಿ ಸಂಚಾರಿ ಪೊಲೀಸ್ ಮುಖ್ಯಸ್ಥ ಜೀರೋ ಅರೋಮೆ ತಿಳಿಸಿದ್ದಾರೆ.

Facebook Comments

Sri Raghav

Admin