ರಜನಿಕಾಂತ್ ಹೊಸ ಅಧ್ಯಾಯ ಪ್ರಾರಂಭಿಸಲಿ : ಪಿ.ಜಿ.ಆರ್.ಸಿಂಧ್ಯಾ

ಈ ಸುದ್ದಿಯನ್ನು ಶೇರ್ ಮಾಡಿ

P-G-R-Sindhia

ಬೆಂಗಳೂರು, ಡಿ.31- ಖ್ಯಾತ ನಟ ರಜನಿಕಾಂತ್ ಅವರು ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದು, ರಾಜಕೀಯದಲ್ಲಿ ಹೊಸ ಅಧ್ಯಾಯ ಪ್ರಾರಂಭ ಮಾಡಲಿ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ. ರಜನಿಕಾಂತ್ ಅವರು ರಾಜಕೀಯಕ್ಕೆ ಹೊಸಬರಲ್ಲ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರಿಗೆ ಬೆಂಬಲ ನೀಡಿದ್ದರು. ಆಗಿನಿಂದಲೂ ಅವರು ರಾಜಕೀಯದ ಜತೆ ಸಂಬಂಧ ಹೊಂದಿದ್ದಾರೆ. ರಾಷ್ಟ್ರದ ನಾಯಕರು ಅವರಿಗೆ ಪರಿಚಯವಿದ್ದಾರೆ. ಬಡವರ ಬಗ್ಗೆ ಅನುಕುಂಪ ಹೊಂದಿದ್ದಾರೆ. ಕರ್ನಾಟಕ ರಾಜ್ಯದ ಬಗ್ಗೆ ಚೆನ್ನಾಗಿ ಅರಿತವರಾಗಿದ್ದು, ಅವರಿಗೆ ಒಳ್ಳೆಯದಾಗಲಿ ಎಂದು ಸಿಂಧ್ಯಾ ಹಾರೈಸಿದರು.

Facebook Comments

Sri Raghav

Admin