ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

Love-Jihad

ಮೈಸೂರು, ಡಿ.31-ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಭಾರತದ ಯುವತಿ ಹಾಗೂ ದಕ್ಷಿಣ ಭಾರತದ ಯುವಕನಿಗೂ ಫೇಸ್‍ಬುಕ್‍ನಲ್ಲಿ ಪ್ರೀತಿ ಅರಳಿ ಲವ್ ಜಿಹಾದ್ ನಡೆದಿದೆ. ತಾಲೂಕಿನ ಜೈಪುರ ವಾಸಿ ಫೈಜಲ್ ಅಹಮ್ಮದ್ ಎಂಬುವರಿಗೂ ಹಾಗೂ ಗುಜರಾತಿನ ದ್ವಾರಕ ಜಿಲ್ಲೆಯ ದೇವಭೂಮಿಯ ನ್ಯಾನ್ಸೀ ಜೋಷಿಯನ್ ಎಂಬಾಕೆಗೂ ಫೇಸ್‍ಬುಕ್‍ನಲ್ಲಿ ಕಳೆದ 3 ವರ್ಷಗಳ ಹಿಂದೆ ಪರಿಚಯವಾಗಿ ಪ್ರೀತಿಗೆ ತಿರುಗಿದೆ.

ಕಳೆದ ಆರು ತಿಂಗಳ ಹಿಂದೆ ಮನೆಯಿಂದ ಹೊರ ಬಂದಿದ್ದ ನ್ಯಾನ್ಸೀ ಫೈಜಲ್ ಅಹಮ್ಮದ್‍ನನ್ನು ವಿವಾಹವಾಗಿ ಮೈಸೂರಿನಲ್ಲಿ ವಾಸವಾಗಿದ್ದಳು. ಆನಂತರ ಗಂಡನ ಮನೆಯವರು ಮುಸ್ಲಿಂ ಧರ್ಮ ಪಾಲನೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಮುಸ್ಲಿಂ ಧರ್ಮಕ್ಕೆ ಮತಾಂತರವನ್ನೂ ಮಾಡಿಸಲಾಗಿತ್ತು. ಖುರಾನ್ ಓದುವಂತೆ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಆಕೆ ತಮ್ಮ ಕುಟುಂಬದವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದು, ಆಕೆ ಸಹೋದರ ಮೈಸೂರಿಗೆ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಗುಜರಾತ್‍ಗೆ ವಾಪಸ್ ಕಳುಹಿಸುವ ವೇಳೆ ಸಾಕಷ್ಟು ಹೈಡ್ರಾಮಾ ನಡೆದಿದ್ದು, ಈ ವೇಳೆ ಫೈಜಲ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗುವುದಾಗಿ ನ್ಯಾನ್ಸೀ ಒಪ್ಪಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

Facebook Comments

Sri Raghav

Admin