ಯಾರನ್ನೂ ಭೇಟಿ ಮಾಡದೆ ವಿಶ್ರಾಂತಿ ಮೊರೆಹೋದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

siddaramaiah-Time

ಬೆಂಗಳೂರು, ಜ.1-ಹೊಸ ವರ್ಷದ ಗುಂಗಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನದವರೆಗೂ ಯಾರನ್ನೂ ಭೇಟಿ ಮಾಡದೆ ವಿಶ್ರಾಂತಿಯ ಮೊರೆ ಹೋದರು. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಲು ಆಗಮಿಸಿದ್ದರು. ಸುಮಾರು ಹೊತ್ತು ನಿರೀಕ್ಷಿಸಿದರೂ ಮುಖ್ಯಮಂತ್ರಿಯವರ ಭೇಟಿ ಸಾಧ್ಯವಾಗದೆ ಇದ್ದುದರಿಂದ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ತೆರಳಿದರು.

ಅದೇ ರೀತಿ ಬಹುತೇಕ ಕಾರ್ಯಕರ್ತರು, ಮುಖಂಡರು ಕೂಡ ಆಗಮಿಸಿದ್ದರಾದರೂ ಅದಕ್ಕೆ ಅವಕಾಶ ಸಿಗಲಿಲ್ಲ. ಸತತ ಪ್ರವಾಸದಿಂದ ದಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮತ್ತು ಇಂದು ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ವಿಶ್ರಾಂತಿಯ ಪಡೆದರು.

Facebook Comments

Sri Raghav

Admin