ಬಡವರ ಹಣದಿಂದ ಮಲ್ಯನ ಸಾಲ ‘ಬ್ಯಾಲೆನ್ಸ್’ ಮಾಡಿಕೊಂಡ ಎಸ್‍ಬಿಐ..!

ಈ ಸುದ್ದಿಯನ್ನು ಶೇರ್ ಮಾಡಿ

SMBI--02

ನವದೆಹಲಿ, ಜ.3-ವಸೂಲಾಗದೇ ಇರುವ ಬೃಹತ್ ಮೊತ್ತದ ಸಾಲದಿಂದ ತೀವ್ರ ಚಿಂತೆಗೆ ಒಳಗಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(ಎಸ್‍ಬಿಐ) ಮಿನಿಮಮ್ ಅಕೌಂಟ್ ಬ್ಯಾಲೆನ್ಸ್ (ಎಂಎಬಿ) ಮೇಲೆ ಶುಲ್ಕ ವಿಧಿಸುವುದು ಈಗ ಲಾಭದಾಯಕ ಆದಾಯ ಮೂಲವಾಗಿದೆ. ದೇಶದ ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‍ಬಿಐ ಕಳೆದ ವರ್ಷ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಗ್ರಾಹಕರಿಗೆ ಎಂಎಬಿ ಶುಲ್ಕ ವಿಧಿಸಿ 1.771 ಕೋಟಿ ರೂ.ಗಳ ಆದಾಯ ಗಳಿಸಿದೆ.

ಕಳಂಕಿತ ಉದ್ಯಮಿ ಮತ್ತು ಉದ್ದೇಶಪೂರ್ವಕ ಸುಸ್ತಿದಾರ ವಿಜಯಮಲ್ಯ ಸೇರಿದಂತೆ ಇತರ ದೊಡ್ಡ ಕುಳಗಳು ಪಾವತಿಸಬೇಕಾಗಿರುವ ಸಾಲದಿಂದ ಉಂಟಾಗಿದ್ದ ನಷ್ಟವನ್ನು ಈ ಮೂಲಕ ಎಸ್‍ಬಿಐ ಸರಿದೂಗಿಸಿಕೊಳ್ಳುತ್ತಿವೆ ಎಂಬ ಮಾತುಗಳು ಆರ್ಥಿಕ ವಲಯದಲ್ಲಿ ಕೇಳಿ ಬರುತ್ತಿವೆ. ಎಸ್‍ಬಿಐ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ್ದ 1,581.55 ಕೋಟಿ ರೂ.ಗಳ ನಿವ್ವಳ ಲಾಭಕ್ಕಿಂತಲೂ ಮಿನಿಮಮ್ ಬ್ಯಾಲೆನ್ಸ್ ದಂಡ ರೂಪದಲ್ಲಿ ಹೆಚ್ಚಿನ ಮೊತ್ತ ವಸೂಲಾಗಿದೆ.

ಕಳೆದ ವರ್ಷ 2016-17ರ ಹಣಕಾಸು ವರ್ಷದಲ್ಲಿ ಎಸ್‍ಬಿಯ ಮಿನಿಮಮ್ ಅಕೌಂಟ್ ಬ್ಯಾಲೆನ್ಸ್ ನಿರ್ವಹಣೆಗಾಗಿ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಈ ಶುಲ್ಕವನ್ನು ಐದು ವರ್ಷಗಳ ಅಂತರದ ನಂತರ ಕಳೆದ ವರ್ಷ ಏಪ್ರಿಲ್‍ನಿಂದ ಮತ್ತೆ ವಿಧಿಸಲಾಗುತ್ತಿದೆ. ದೇಶಾದ್ಯಂತ ಎಸ್‍ಬಿಐ ಒಟ್ಟು 42 ಕೋಟಿ ಉಳಿತಾಯ ಖಾತೆಗಳನ್ನು ಹೊಂದಿದೆ. ಇದರಲ್ಲಿ 13 ಕೋಟಿ ಮೂಲ ಉಳಿತಾಯ ಠೇವಣಿ ಖಾತೆಗಳು ಮತ್ತು ಪ್ರಧಾನಮಂತ್ರಿ ಜನ್-ಧನ್ ಯೋಜನಾ ಖಾತೆಗಳಿವೆ. ಇವೆರಡು ಖಾತೆಗಳು ಇಂಥ ಶುಲ್ಕಗಳಿಂದ ವಿನಾಯಿತಿ ಪಡೆದಿವೆ.

Facebook Comments

Sri Raghav

Admin