ಪಾಕ್ ನಿಂದ ನಿರಂತರ ಅಪ್ರಚೋದಿತ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಗಡಿ ಭಾಗದ ಗ್ರಾಮಸ್ಥರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Border--01

ಜಮ್ಮು, ಜ.4-ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಾ ಅಪ್ರಚೋದಿತ ದಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ(ಐಬಿ) ಪ್ರದೇಶಗಳಲ್ಲಿ ಪಾಕ್ ಯೋಧರಿಂದ ಪುಂಡಾಟ ಮುಂದುವರಿದಿರುವುದರಿಂದ ಆ ಭಾಗದ ಸ್ಥಳೀಯರು ಭಯಭೀತರಾಗಿದ್ದಾರೆ. ತಮ್ಮ ಮನೆಗಳಿಂದ ಹೊರ ಬರದಂತೆ ಸ್ಥಳೀಯಾಡಳಿತ ಸೂಚನೆ ನೀಡಿದೆ. ಗುಂಡಿನ ದಾಳಿ ಅವ್ಯಾಹತವಾಗಿ ಮುಂದುವರಿದಿದ್ದು, ಇದೇ ವೇಳೆ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯದಲ್ಲಿ ಪೊಲೀಸರು ನೆರವಾಗುತ್ತಿದ್ದಾರೆ.

ಗಡಿಯಾಚೆಯಿಂದ ಪಾಕಿಸ್ತಾನಿ ರೇಂಜರ್‍ಗಳಿಂದ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಸಾವು-ನೋವು ಸಂಭವಿಸುವುದನ್ನು ಅಥವಾ ಆಸ್ತಿಪಾಸ್ತಿ ನಷ್ಟವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.  ಪಾಕಿಸ್ತಾನ ನಿನ್ನೆ ರಾತ್ರಿ ನಡೆಸಿದ ದಾಳಿಯಲ್ಲಿ ಭಾರತೀಯ ಯೋಧನೊಬ್ಬ ಹುತಾತ್ಮನಾಗಿದ್ದು, ಎರಡೂ ಕಡೆ ನಿರಂತತ ಗುಂಡಿನ ದಾಳಿ ಮುಂದುವರಿದಿತ್ತು.

ಜನ್ಮದಿನವೇ ಹುತಾತ್ಮನಾದ ಹಜ್ರಾ :
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಹಿರಾನಗರ್ ವಲಯದ ಭಾರತೀಯ ಸೇನಾ ನೆಲೆಯನ್ನು ಗುರಿಯಾಗಿಟ್ಟುಕೊಂಡು ಪಾಕ್ ನಡೆಸಿದ ದಾಳಿಯಲ್ಲಿ ಬಿಎಸ್‍ಎಫ್ ಮುಖ್ಯ ಪೇದೆ ಆರ್.ಪಿ.ಹಜ್ರಾ ಹುಟ್ಟುಹಬ್ಬದ ದಿನದಂದೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ.

Facebook Comments

Sri Raghav

Admin